ಒಪಿಎಸ್ ಮರು ಜಾರಿಯಾಗಲಿ

hbh-1
ಹಗರಿಬೊಮ್ಮನಹಳ್ಳಿಯಲ್ಲಿ ಉಪ ತಹಸೀಲ್ದಾರ್ ಶಿವಕುಮಾರಗೌಡಗೆ ತಾಲೂಕು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪಿಂಚಣಿದಾರರ ಒಕ್ಕೂಟದ ಅಧ್ಯಕ್ಷ ಈ.ಕೆ.ಮೂರ್ತಿ, ಕಾರ್ಯದರ್ಶಿ ವೀರೇಶ, ಕೆ.ಎಂ.ಚಿದಾನಂದಯ್ಯ, ಎಚ್.ಎಂ.ಶ್ರೀಶೈಲ, ಎಸ್.ಶಿವಪುತ್ರಪ್ಪ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಪಿಂಚಣಿದಾರರಿಗೆ ಆರೋಗ್ಯ ಯೋಜನೆ ಅಥವಾ ಕೇಂದ್ರ ಸರ್ಕಾರದಂತೆ ಸಿಜಿಎಸ್‌ಎಸ್ ಯೋಜನೆ, ಕೇರಳ ಮಾದರಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್ ಶಿವಕುಮಾರಗೌಡಗೆ ತಾಲೂಕು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ಸಲ್ಲಿಸಿದರು.

ಪಿಂಚಣಿದಾರರ ಒಕ್ಕೂಟದ ತಾಲೂಕು ಅಧ್ಯಕ್ಷ ಈ.ಕೆ.ಮೂರ್ತಿ ಮಾತನಾಡಿ, ಕೂಡಲೆ ಎನ್‌ಪಿಎಸ್, ಯುಪಿಎಸ್‌ಗಳು ರದ್ದು ಮಾಡಿ, ಒಪಿಎಸ್ ಮರು ಜಾರಿಮಾಡಬೇಕು. ಆರ್ಥಿಕ ಸಂಹಿತೆ ತಿದ್ದುಪಡಿ ಹಿಂಪಡೆಯಬೇಕು. ಪಿಂಚಣಿ, ಡಿಎ ಸೇರಿದಂತೆ ಇತರ ಸೌಲಭ್ಯಗಳನ್ನು ಕಸಿಯುತ್ತಿರುವ ಕೇಂದ್ರ ಸರ್ಕಾರ ಈ ಕುರಿತ ನಿರ್ಧಾರ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಕೋವಿಡ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡ 18 ತಿಂಗಳ ತುಟ್ಟಿಭತ್ಯೆಯನ್ನು ಕೂಡಲೆ ಬಿಡುಗಡೆಗೊಳಿಸಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಒಟ್ಟು 60 ಲಕ್ಷಕ್ಕೂ ಹೆಚ್ಚು ಖಾಲಿ ಇರುವ ಹುದ್ದೆಗಳನ್ನು ಕೂಡಲೆ ತುಂಬಿಕೊಳ್ಳಬೇಕು. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಕೆ.ಎಂ.ಚಿದಾನಂದಯ್ಯ, ಎಚ್.ಎಂ.ಶ್ರೀಶೈಲ, ಎಸ್.ಶಿವಪುತ್ರಪ್ಪ, ಟಿ.ರುದ್ರಪ್ಪ, ಟಿ.ಅರವಿಂದ, ವಿ.ಬಿ.ಮಲ್ಲೇಶ, ಡಿ.ವೆಂಕಣ್ಣ ಎ.ಮಂಜುನಾಥ, ಪ್ರಭಾಕರ ಕಲಾಲ್, ಟಿ.ಹಜರತ್ ಸಾಬ್, ಕೆ.ಚನ್ನಬಸಪ್ಪ, ಕುಮಾರಪ್ಪ, ರೇವಣಪ್ಪ, ಎ.ವಾಮದೇವ, ಗಣೇಶ ಹವಲ್ದಾರ್, ಮುದ್ದಪ್ಪ, ವೈ.ಮಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net