

ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ನೀರಾವರಿ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಿರುವೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ವರದಾಪುರ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಬುಧವಾರ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕೆಕೆಆರ್‌ಡಿಬಿ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಿಸಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಆಗದಂತೆ ಕ್ರಮವಹಿಸಲಾಗುವುದು ಎಂದರು.
ಪ್ರಮುಖರಾದ ಪಿ.ಸೂರ್ಯಬಾಬು, ಕಡ್ಲೆಪ್ಪ, ಮುಗಲಿ ಭೀಮಣ್ಣ, ಪಿ.ರಾಜಲಿಂಗಪ್ಪ, ಮಾದೇಗೌಡ, ಬಾಷಾಸಾಹೇಬ್, ಸೋಮಶೇಖರ, ಹನಸಿ ಜಯಪ್ರಕಾಶ್‌ಗೌಡ, ಶಿವನಗೌಡ, ಗುತ್ತಿಗೆದಾರ ದೊಡ್ಡಬಸಪ್ಪ ಇತರರಿದ್ದರು.