ಸರ್ಕಾರದ ಸೌಕರ್ಯಗಳು ಸದ್ಬಳಕೆಯಾಗಲಿ

13.HBH. 1
Published on

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕರಿಗಾಗಿ ಮುಕ್ತಿ ವಾಹನ ಮತ್ತು ನಾಲ್ಕನೇ ವಾರ್ಡ್‌ನಲ್ಲಿ 15ನೇ ಹಣಕಾಸು ಯೋಜನೆಯಡಿ 15.20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಶೌಚಗೃಹಕ್ಕೆ ಪುರಸಭೆ ಅಧ್ಯಕ್ಷ ಮರಿರಾಮಪ್ಪ ಗುರುವಾರ ಚಾಲನೆ ನೀಡಿದರು.

ಸಾರ್ವಜನಿಕರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಪ್ರಯತ್ನ ನಿರಂತರವಾಗಿರುತ್ತದೆ. ಪುರಸಭೆ ವ್ಯಾಪ್ತಿಯಲ್ಲಿ ಯಾರೇ ನಿಧನರಾದರೂ ಅಂತ್ಯಕ್ರಿಯೆಗೆ ಮುಕ್ತಿವಾಹನದ ಸೇವೆ ಸದ್ಯ ಉಚಿತವಾಗಿ ಸಿಗಲಿದೆ. ಮುಂದಿನ ದಿನಗಳಲ್ಲ್ಲಿ ಗೌರವ ದರ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

ನಾಲ್ಕನೇ ವಾರ್ಡ್ ಜೆಜೆ ನಗರದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಶೌಚಗೃಹ ಪೇ ಅಂಡ್ ಯೂಸ್ ಆಗಿದ್ದು, ಸಾರ್ವಜನಿಕರು ಶುಚಿತ್ವ ಕಾಪಾಡಬೇಕು. ಸರ್ಕಾರದ ಸೌಕರ್ಯಗಳನ್ನು ಸದ್ಬಳಕೆಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರ, ನಾಮನಿರ್ದೇಶಿತರಾದ ತ್ಯಾವಣಿಗಿ ಕೊಟ್ರೇಶ, ಯು.ಬಾಳಪ್ಪ, ಪ್ರಮುಖರಾದ ಎಚ್.ಎಂ.ವಿಜಯಕುಮಾರ, ಸೆರೆಗಾರ ಹುಚ್ಚಪ್ಪ, ಅಲ್ಲಾಭಕ್ಷಿ, ಗುಂಡ್ರು ಹನುಮಂತಪ್ಪ, ಆರ್.ಒ.ಮಾರೆಪ್ಪ, ಮ್ಯಾನೇಜರ್ ಚಂದ್ರಶೇಖರ, ಆರೋಗ್ಯಾಧೀಕಾರಿ ನಾಗರತ್ನ, ಇಂಜಿನಿಯರ್ ಹುಸೇನ್ ಬಾಷಾ, ಯೋಜನಾಧಿಕಾರಿ ಬಸವರಾಜಪ್ಪ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net