ಜನಮನ ಸೆಳೆದ ಹಾಲಕ್ಕಿ ಒಕ್ಕಲಿಗರ ಹಗಣ

9ankola6c
Published on

ವಿಜಯವಾಣಿ ಸುದ್ದಿಜಾಲ ಅಂಕೋಲಾ

ಹೋಳಿ ಹಬ್ಬದ ನಿಮಿತ್ತ ಸೋಮವಾರ ಹಾಲಕ್ಕಿ ಒಕ್ಕಲಿಗರ ಸಮುದಾಯದವರ ಹಗಣ ಮತ್ತು ಸುಗ್ಗಿ ಕುಣಿತ ಜನಮನ ಸೆಳೆಯಿತು. ಪಟ್ಟಣದ ಜೈಹಿಂದ್ ಮೈದಾನದಿಂದ ಹೊರಟ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೆ.ಸಿ. ರಸ್ತೆ ಮೂಲಕ ತಾಲೂಕು ಆಡಳಿತ ಕಚೇರಿಗೆ ತೆರಳಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.

ಪ್ರಸ್ತುತ ಘಟನೆಯಾಗಿರುವ ಕರೋನಾ ವೈರಸ್, ನೆರೆ ನಿರಾಶ್ರಿತರ ಬವಣೆ, ರಾಮ ಸೇತುವೆ ನಿರ್ವಣ, ಟ್ರಂಪ್ ಭಾರತ ಭೇಟಿ, ಕಿಸ್ತೂರು ಸಂಸ್ಥಾನದ ಯುದ್ಧ, ದೈತ್ಯ ಪ್ರಾಣಿ ಆಕೃತಿ ಸೇರಿ ವಿವಿಧ ವಿಡಂಬನಾತ್ಮಕ ರೂಪಕಗಳು ಪ್ರದರ್ಶನಗೊಂಡವು.

ತಹಸೀಲ್ದಾರ್ ಕಚೇರಿಯಲ್ಲಿ ಸಂಪ್ರದಾಯದಂತೆ ಬೆಳಂಬಾರ ಸುಗ್ಗಿ ತಂಡದವರು ಕುಣಿತ ಪ್ರದರ್ಶಿಸಿದರು. ಮುಖ್ಯಸ್ಥನಿಗೆ ಹಿಂದೆ ಬ್ರಿಟಿಷರು ನೀಡಿದ್ದ ತಾಮ್ರಫಲಕ ಹಾಗೂ ಗೌರವ ಧನವನ್ನು ತಹಸೀಲ್ದಾರ್ ಮೇಘರಾಜ ನಾಯ್ಕ ನೀಡಿದರು. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಹನುಮಂತ ಗೌಡ, ಸೇರಿ ನೂರಾರು ಜನರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net