ಹಡವನಹಳ್ಳಿ ಶಾಲೆಯಲ್ಲಿ ಗಣರಾಜ್ಯೋತ್ಸವ

4
Published on

ಹೊಳೆನರಸೀಪುರ : ತಾಲೂಕಿನ ಹಡವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮದ ಹಿರಿಯ ಮುಖಂಡ ನಿಂಗೇಗೌಡ ಮಾತನಾಡಿ ನಮ್ಮ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಮಹತ್ವದ ಸಂವಿಧಾನವಾಗಿದೆ. ಇದರಿಂದ ಶಕ್ತಿಶಾಲಿ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲು ಸಹಕಾರಿ ಆಗಿದೆ ಎಂದರು.
ಸಂವಿಧಾನವನ್ನು ಗೌರವಿಸುವ ಮೂಲಕ ದೇಶದ ಪ್ರಗತಿಗೆ ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕೋಣ ಎಂದರು. ಶಾಲಾಭಿವೃದ್ದಿ ಸಮಿತಿ ಸದಸ್ಯೆ ಮೀನಾಕ್ಷಿ, ಶಿಕ್ಷಕ ಶಿವಕುಮಾರಾಚಾರಿ, ಶಿಕ್ಷಕಿ ಯಶೋದಾ ಮಾತನಾಡಿದರು. ಶಾಲೆಗೆ ಕುಡಿಯುವ ನೀರು ಪೂರೈಕೆ ಮಾಡಲು ಸಹಕರಿಸಿದ ದಾನಿ ಸಿ.ಆರ್. ಮಂಜುನಾಥ್ ಮತ್ತು ಸಿ.ಎಲ್.ರವಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಶಿಕ್ಷಕಿಯರಾದ ಸರಸ್ವತಿ, ನಿರ್ಮಲಾ ಕುಮಾರಿ, ಭಾಗ್ಯಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net