

ವಿಜಯಪುರ: ಜ್ಞಾನದ ಮೇರು ಪರ್ವತ, ಶರಣ ಹಡಪದ ಅಪ್ಪಣ್ಣ ಅವರ ಜನ್ಮಭೂಮಿ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳದ ಸಮಗ್ರ ಪ್ರಗತಿಗೆ "ಮಸಬಿನಾಳ ಚಲೋ' ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ತಂಗಡಗಿಯ ಅನ್ನದಾನಿ ಅಪ್ಪಣ್ಣ ಸ್ವಾಮೀಜಿ ತಿಳಿಸಿದರು
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂದಿಂದ ಗುರುವಾರ ನಡೆದ ಶರಣ ಶ್ರೀ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಹಾಗೂ ಹಡಪದ ಅಪ್ಪಣ್ಣ ಸಮಾಜದ ಬೃಹತ್ ಜನಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಶರಣ ಹಡಪದ ಅಪ್ಪಣ್ಣನವರು ಕಾಯಕದ ಮಹತ್ವ ಸಾರಿದವರು. ಬಸವಣ್ಣನವರ ಒಡನಾಡಿಯಾಗಿದ್ದ ಹಡಪದ ಅಪ್ಪಣ್ಣನವರ ಜನ್ಮಭೂಮಿ ಬಹಳ ವರ್ಷಗಳ ಹಿಂದೆಯೇ ಅಭಿವೃದ್ಧಿ ಕಾಣಬೇಕಿತ್ತು. ಆದರೆ, ಸರ್ಕಾರಗಳ ರ್ನಿಲಕ್ಷದಿಂದ ಮಸಬಿನಾಳ ಇಂದಿಗೂ ಅಭಿವೃದ್ಧಿಯಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಮಸಬಿನಾಳ ಚಲೋ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸಂದ ರಾಜ್ಯಾಧ್ಯಕ್ಷ ಸಿದ್ದಣ್ಣ ಮುಂಡಗೋಡ ಮಾತನಾಡಿ, ನಮ್ಮ ಸಮಾಜವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಲಪಡಿಸಬೇಕಿದೆ. ಹಲವು ಜಿಲ್ಲೆಗಳಲ್ಲಿ ಸಂಟನೆ ಆಮೆಗತಿಯಲ್ಲಿ ಸಾಗಿದ್ದು, ಸಮಾಜ ಸಂಟನೆಯ ಪವಿತ್ರ ಕಾರ್ಯದಲ್ಲಿ ಸಮಾಜದ ಪ್ರತಿಯೊಬ್ಬರು ಭಾಗವಹಿಸಿ ಸಂಟನೆಯ ಭಾಗವಾಗಬೇಕು. ಸಂಟನೆಯಿಂದಲೇ ಸಮಾಜದ ಪ್ರಗತಿ ಸಾಧ್ಯ ಎಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಮಾತನಾಡಿ, ಹಡಪದ ಅಪ್ಪಣ್ಣವರು ಕಾಯಕ ನಿಷ್ಠೆಗೆ ಹೆಸರುವಾಸಿ. ಅವರ ವಿಚಾರ& ಚಿಂತನೆಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಭೀಮಾಶಂಕರ ಉಪನ್ಯಾಸ ನೀಡಿ, ಶಿಣದಿಂದ ಪ್ರಗತಿ ಸಾಧ್ಯ. ಹೀಗಾಗಿ ಸಮಾಜ ಬಾಂಧವರು ಶಿಣಕ್ಕೆ ಪ್ರಥಮಾದ್ಯತೆ ನೀಡಬೇಕು ಎಂದು ತಿಳಿಸಿದರು.
ಪಾಲಿಕೆ ಉಪ ಮೇಯರ್ ದಿನೇಶ ಹಳ್ಳಿ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಮುಖಂಡ ಅಬ್ದುಲ್ ರಜಾಕ ಹೊರ್ತಿ, ಬಸನಗೌಡ ಪಾಟೀಲ ಚಬನೂರ, ವಿಡಿಎ ಸದಸ್ಯೆ ಕಾಶೀಬಾಯಿ ಹಡಪದ, ಸಂತೋಷ ತಳಕೇರಿ, ಸಂಜು ಕುಮಶಿ, ಡಾ. ಎಚ್.ಡಿ. ವೈದ್ಯ, ದಯಾನಂದ ಕೆಲೂರ, ನಾಗರಾಜ ಸರ್ಜಾಪುರ, ಎನ್.ಜಿ. ಯರನಾಳ, ನಿಂಗಪ್ಪ ನಾವಿ. ಮಲ್ಲೆಶಿ ಅರ್ಜುಣಗಿ, ವಿರುಪಾ ಕತ್ನಳ್ಳಿ, ಪ್ರಕಾಶ ಉತ್ನಾಳ, ರಾಮು ಹಡಪದ, ಮಹಾಂತೇಶ ಮೂಲಿಮನಿ, ಚಂದ್ರಶೇಖರ ಅಮಲಿಹಾಳ, ನಟರಾಜ ಗವಳಿ, ಸದಾನಂದ ನಿಂಬರಗಿ ಮತ್ತಿತರರಿದ್ದರು.
ಸಂಜೀವ ಶಿವಣಗಿ ಸ್ವಾಗತಿಸಿದರು. ಓಂಕಾರ ನಾವಿ ನಿರೂಪಿಸಿದರು. ಕುಮಾರಿ ಅನನ್ಯ ಹಡಪದ ಹಾಗೂ ದಾನೇಶ್ವರಿ ಹಡಪದ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮಕ್ಕೂ ಮುನ್ನ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಶ್ರೀ ಹಡಪದ ಅಪ್ಪಣ್ಣವರ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಕಲಾ ವಾದ್ಯ ವೈಭವ ಮೆರವಣಿಗೆಯಲ್ಲಿದ್ದವು. ಜತೆಗೆ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.