ತಬಲವಾದಕ ಪಂಡಿತ್ ಸಾತಲಿಂಗಪ್ಪ ದೇಸಾಯಿಕಲ್ಲೂರರಿಗೆ ಹಡಪದ ಪ್ರಶಸ್ತಿ ಪ್ರದಾನ

adapada award
Published on

ಮೈಸೂರು: ಕುವೆಂಪುನಗರದ ಗಾನಭಾರತೀ ವೀಣೆಶೇಷಣ್ಣ ಭವನದಲ್ಲಿ ಭಾನುವಾರ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ವತಿಯಿಂದ ಪಂಡಿತ್ ಕೆ.ಎಸ್. ಹಡಪದ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಮತ್ತು ಹಡಪದ ಪ್ರಶಸ್ತಿ ಪ್ರದಾನ ನಡೆಯಿತು.

ತಬಲವಾದಕ ಪಂಡಿತ್ ಸಾತಲಿಂಗಪ್ಪ ದೇಸಾಯಿಕಲ್ಲೂರ ಅವರಿಗೆ 2003ನೇ ಸಾಲಿನ ಹಡಪದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಜಯದೇವಿ ಜಂಗಮಶೆಟ್ಟಿ, ಪುಟ್ಟರಾಜ ಗವಾಯಿ ಹೆಸರಿನಲ್ಲಿ ಎಲ್ಲ ವರ್ಗದವರು ಹಾಗೂ ಅಂಗವಿಕಲರು ಕಲಿಯುವಂತಹ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಅಭಿಪ್ರಾಯಪಟ್ಟರು.

ಹಿಂದೂಸ್ತಾನಿ ಸಂಗೀತಕ್ಕೆ ಪುಟ್ಟರಾಜ ಗವಾಯಿ ಹಾಗೂ ಪಂಚಾಕ್ಷರಿ ಗವಾಯಿಗಳ ಕೊಡುಗೆ ಅಪಾರ. ಹಲವರು ಗವಾಯಿಗಳ ಆಶ್ರಮದಲ್ಲಿ ಕಲಿತು ವಿದ್ವಾಂಸರಾಗಿದ್ದಾರೆ. ಸಂಗೀತ ದಾಸೋಹದ ಜತೆಗೆ ಜ್ಞಾನ ದಾಸೋಹ, ಅನ್ನ ದಾಸೋಹವೂ ನಿರಂತರವಾಗಿ ನಡೆಯುತ್ತಿದೆ ಎಂದರು.

ವೇದಿಕೆಯಲ್ಲಿ ಜಿಎಸ್‌ಎಸ್‌ಎಸ್ ಸಂಸ್ಥೆ ಪ್ರಾಂಶುಪಾಲರಾದ ಎಚ್.ಆರ್. ಹೇಮಲತಾ, ಗುರು ಪುಟ್ಟರಾಜ ಸಂಗೀತ ಸಭಾದ ಅಧ್ಯಕ್ಷ ಭೀಮಶಂಕರ್ ಬಿದನೂರ, ಗಾನಭಾರತೀ ಸಂಸ್ಥೆ ಖಜಾಂಚಿ ಸಿ.ಎಸ್. ಜನಾರ್ದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net