ಸಮಾಜದ ಉನ್ನತಿಗೆ ಶ್ರಮಿಸಿದ ಹಡಪದ ಅಪ್ಪಣ್ಣ

APPANNA
ನರಗುಂದ ಸೋಮಾಪೂರ ಬಡಾವಣೆಯ ಗಂಗೇಶ್ವರ ದೇವಸ್ಥಾನದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ಶರಣಪ್ಪ ಹಡಪದ, ರವಿ ಹಡಪದ, ಮುದಕಪ್ಪ ಹಡಪದ, ಮಂಜು ಸುರಕೋಡ ಇತರರಿದ್ದರು.
Published on

ನರಗುಂದ: ತ್ಯಾಗಮಯಿಯಾಗಿದ್ದ ಹಡಪದ ಅಪ್ಪಣ್ಣನವರು ಸಾಮಾಜಿಕ ಕ್ರಾಂತಿಕಾರಕರಾಗಿ, ವಚನಗಳ ಮೂಲಕ ಸಮಾಜಕ್ಕೆ ಉನ್ನತ ಮೌಲ್ಯಗಳನ್ನು ತಿಳಿಸಿಕೊಟ್ಟರು. ಅವರ ಆದರ್ಶಗಳನ್ನು ನಾವೆಲ್ಲ ಪಾಲಿಸೋಣ ಎಂದು ಹಡಪದ ಅಪ್ಪಣ್ಣ ಸಮಾಜದ ಕಾರ್ಯದರ್ಶಿ ಚಂದ್ರಶೇಖರ ಹಡಪದ ತಿಳಿಸಿದರು.

ನರಗುಂದ ಸೋಮಾಪೂರ ಬಡಾವಣೆಯ ಗಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಬಸವಣ್ಣನವರ ಅನುಯಾಯಿಗಳಾಗಿ 12ನೇ ಶತಮಾನದಲ್ಲಿ ಮೌಢ್ಯ ನಿವಾರಣೆಗೆ ಅನೇಕ ಧರ್ಮ ಕಾರ್ಯಗಳನ್ನು ಹಮ್ಮಿಕೊಂಡಿದ್ದರು ಎಂದರು.

ಶರಣಪ್ಪ ಹಡಪದ, ರವಿ ಹಡಪದ, ಮುದಕಪ್ಪ ಹಡಪದ, ಮಂಜು ಸುರಕೋಡ, ಮಾರುತಿ ಬಾಗೂರ, ಚನ್ನಬಸಪ್ಪ ಹಡಪದ, ಅಶೋಕ ಬಾಗೂರ, ರಾಮಪ್ಪ ಅಮರಗೋಳ, ಮಂಜು ಹೈತಾಪೂರ, ರುದ್ರಪ್ಪ ಹಡಪದ, ರುದ್ರಪ್ಪ ಬನಹಟ್ಟಿ, ಸುನೀಲ ಚಿಕ್ಕನರಗುಂದ, ಅಪ್ಪಣ್ಣ ಹಡಪದ, ಮಂಜು ಹಡಪದ, ಧರ್ಮಣ್ಣ ಹಡಪದ, ಶಂಕರ ಬೆಳವಟಗಿ, ಫಕೀರಪ್ಪ ದಾಟನಾಳ, ಮುತ್ತು ಹಡಗಲಿ, ಮುದಕಪ್ಪ ಸುರಕೋಡ, ಮಲ್ಲೇಶ ಅಳಗುಂಡಿ, ಹನುಮಂತ ಹೈತಾಪೂರ, ರವಿ ಹೈತಾಪೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net