ಅಪ್ಪಣ್ಣ ಜಯಂತಿ ಅಚ್ಚುಕಟ್ಟಾಗಿ ಆಚರಣೆ

hadapada Appanna jaytanti meeting in koppal AC Mahesh malagitti
ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕುರಿತು ಕೊಪ್ಪಳದಲ್ಲಿ ಮಂಗಳವಾರ ಎಸಿ ಕ್ಯಾ.ಮಹೇಶ ಮಾಲಗಿತ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಮುದಾಯ ಮುಖಂಡರಾದ ಮಂಜುನಾಥ ಹಂದ್ರಾಳ, ಬಸಪ್ಪ ಹಲಗೇರಿ, ರಮೇಶ ಹಡಪದ, ಬಸವರಾಜ ಹೊಸಳ್ಳಿ, ಗವಿಸಿದ್ದಪ್ಪ ಕಾಟ್ರಳ್ಳಿ ಇದ್ದರು.
Published on

ಕೊಪ್ಪಳ: ಜಿಲ್ಲಾಡಳಿತದಿಂದ ಜು.21ರಂದು ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಗುವುದೆಂದು ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ ಹೇಳಿದರು.

ನಗರದ ತಮ್ಮ ಸ್ವ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜು.21ರಂದು ಜಿಲ್ಲಾ, ತಾಲೂಕು ಕಚೇರಿಗಳಲ್ಲಿ ಜಯಂತಿ ಆಚರಿಸಿ. ಸಮುದಾಯ ಜನರ ಸಹಕಾರವೂ ಅಗತ್ಯ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಂಭ್ರಮದಿಂದ ಜಯಂತಿ ಆಚರಣೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ. ಅಂದು ಬೆಳಗ್ಗೆ 9 ಗಂಟೆಗೆ ಕೊಪ್ಪಳದ ಶ್ರೀ ಮಹೇಶ್ವರ ದೇವಸ್ಥಾನದಿಂದ ಗಡಿಯಾರ ಕಂಬ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ಅಪ್ಪಣ್ಣ ಭಾವಚಿತ್ರ ಮೆರವಣಿಗೆ ನಡೆಯಲಿದೆ. 11 ಗಂಟೆಗೆ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಇರಲಿದೆ. ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಮುದಾಯ ಮುಖಂಡರಾದ ಮಂಜುನಾಥ ಹಂದ್ರಾಳ, ಬಸಪ್ಪ ಹಲಗೇರಿ, ರಮೇಶ ಹಡಪದ, ಬಸವರಾಜ ಹೊಸಳ್ಳಿ, ಗವಿಸಿದ್ದಪ್ಪ ಕಾಟ್ರಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net