ಬಸಾಪುರದಲ್ಲಿ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಅದ್ದೂರಿ ಆಚರಣೆ

HADAPADA
ಗಂಗಾವತಿ ತಾಲೂಕಿನ ಬಸಾಪಟ್ಟಣದ ಶ್ರೀ ಶರಣಬಸವೇಶ್ವರ ದೇವಾಲಯದಲ್ಲಿ ಶ್ರೀ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿತ್ತು. ಪ್ರಮುಖರಾದ ಪಂಪಾಪತಿ, ದೇವಪ್ಪ, ವಿರುಪಣ್ಣ, ನಿಂಗಪ್ಪ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಬಸಾಪಟ್ಟಣದ ಶ್ರೀ ಶರಣಬಸವೇಶ್ವರ ದೇವಾಲಯದಲ್ಲಿ ಶನಿವಾರ ಶ್ರೀ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿತ್ತು.

ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಗ್ರಾಮದ ಪ್ರಮುಖ ಪಂಪಾಪತಿ ಮಾತನಾಡಿ, ಸಮ ಸಮಾಜ ನಿರ್ಮಾಣದಲ್ಲಿ ಅನುಭವ ಮಂಟಪದ ಶರಣರು ಹಗಲು ರಾತ್ರಿ ಶ್ರಮಿಸಿದ್ದು, ಹಡಪದ ಅಪ್ಪಣ್ಣ ಸಹ ಪ್ರಮುಖರಾಗಿದ್ದಾರೆ. ತುಳಿತಕ್ಕೊಳಗಾದ ಸಮಾಜಗಳು ಶಿಕ್ಷಣ ಜಾಗೃತಿ ಮೂಲಕ ಕಾಯಕ ಮಾಡಿ ಮುಖ್ಯವಾಹಿನಿಗೆ ಬರಬೇಕು. ಶಿಕ್ಷಣವಂತರು ಸಂಸ್ಕಾರ ಹಂಚುವ ಕಾರ್ಯ ಮಾಡಬೇಕೆಂದರು.

ನಂತರ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಸಮಾಜದ ಮುಖಂಡರಾದ ದೇವಪ್ಪ, ವಿರುಪಣ್ಣ, ನಿಂಗಪ್ಪ, ತ್ರಿಗುಣೆಪ್ಪ, ಮುದುಕಪ್ಪ ಬೆಣಕಲ್, ಪಂಪಾಪತಿ ಆರಾಳ್, ಗ್ರಾಮ ಸಂಘದ ಅಧ್ಯಕ್ಷ ವೀರಭದ್ರಪ್ಪ, ಪದಾಧಿಕಾರಿಗಳಾದ ಶರಣಪ್ಪ, ಅಮರೇಶ, ಮಲ್ಲಪ್ಪ, ಮುತ್ತಪ್ಪ, ಈಶಪ್ಪ, ಶರಣಪ್ಪ, ವೀರೇಶ, ಮಾರುತಿ, ಹನುಮೇಶ ಬೆಣಕಲ್, ಲಕ್ಷ್ಮಣ ಉಡುಮಕಲ್, ಪರಶುರಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net