ಬದುಕುವುದನ್ನು ಕಲಿಸಿದ ಶರಣರು

22-KGL-1,,,,
ಕೊಳ್ಳೇಗಾಲ ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಅವರ 891ನೇ ಜಯಂತಿ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರೇಖಾ ರಮೇಶ್, ಎ.ಪಿ.ಶಂಕರ್, ಬಸವರಾಜು, ಕುಮಾರ್, ಗುರುಶಾಂತಪ್ಪ ಬೆಳ್ಳುಂಗಡಿ, ಶಿವಣ್ಣ ಇದ್ವಾಂಡಿ ಇತರರು ಇದ್ದರು.
Published on

ಕೊಳ್ಳೇಗಾಲ: ಶರಣರು 12ನೇ ಶತಮಾನದಲ್ಲಿ ವಚನಗಳ ಮೂಲಕ ಬದುಕುವುದನ್ನು ಕಲಿಸಿದರು ಎಂದು ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಶಿವಣ್ಣ ಹಿಂದ್ವಾಡಿ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ಮತ್ತು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅವರ 891ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

12ನೇ ಶತಮಾನ ಭಕ್ತಿಯನ್ನು ಬೆಳೆಸಿದ ಕಾಲವಾಗಿದೆ. ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ. ಆಧ್ಯಾತ್ಮಿಕ, ಸಾಹಿತ್ಯಾತ್ಮಕ ದೃಷ್ಟಿಯಲ್ಲಿ ಸುವರ್ಣ ಯುಗವಾಗಿತ್ತು. ಅಂದು ನಡೆಯೇ ನುಡಿಯಾಗಿತ್ತು, ನುಡಿಯೇ ನಡೆಯಾಗಿತ್ತು. 12ನೇ ಶತಮಾನದಲ್ಲಿ ಬಸವಣ್ಣ ಅವರ ಹಾದಿಯಾಗಿ ಅಲ್ಲಮ್ಮಪ್ರಭು, ಹಡಪದ ಅಪ್ಪಣ್ಣ ಇನ್ನಿತರ ಕಲ್ಯಾಣ ಕರ್ನಾಟಕದ ನೂರಾರು ಶರಣರು ನಮಗೆ ತಮ್ಮ ವಚನಗಳ ಮೂಲಕ ಜೀವನವನ್ನು ಕಲಿಸಿದ್ದಾರೆ. ಬದುಕುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ. ಹಡಪದ ಅಪ್ಪಣ್ಣ ಮಹಾಜ್ಞಾನಿ, ಬಸವಣ್ಣ ಅವರಿಗೆ ಪರಮಾಪ್ತರಾಗಿದ್ದರು ಎಂದು ತಿಳಿಸಿದರು.

ಈ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್, ತಹಸೀಲ್ದಾರ್ ಬಸವರಾಜು, ಗ್ರೇಡ್ 2 ತಹಸೀಲ್ದಾರ್ ಕುಮಾರ್, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸವಿತಾ ಸಮಾಜ ತಾಲೂಕು ಅಧ್ಯಕ್ಷ ರಾಚಶೆಟ್ಟಿ(ತಮ್ಮಯ್ಯ) ಕಾರ್ಯದರ್ಶಿ ನವೀನ್, ಖಜಾಂಚಿ ಮಹೇಶ್, ಸಂಘಟನಾ ಕಾರ್ಯದರ್ಶಿ ಮಹೇಶ್, ಮುತ್ತುರಾಜ್, ಪದಾಧಿಕಾರಿ ಸುರೇಶ್, ಪುಟ್ಟಲಿಂಗಶೆಟ್ಟಿ, ಪಿ.ನಾಗಣ್ಣ, ಟೈಲರ್ ಮಹೇಶ್, ಸಮಾಜದ ಮಹಿಳಾ ಸಂಘದ ಅಧ್ಯಕ್ಷೆ ದೊಡ್ಡತಾಯಮ್ಮ, ಮಾಜಿ ಅಧ್ಯಕ್ಷ ಸೋಮಣ್ಣ, ಉಪಾಧ್ಯಕ್ಷ ರಾಚಪ್ಪ, ಸವಿತಾ ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net