ಹುಬ್ಬಳ್ಳಿ: ನಗರದ ಗೋಕುಲ ರಸ್ತೆ, ಮುರಾಜಿರ್ನಗರ 2ನೇ ಹಂತ, ಬಸವ ಕೇಂದ್ರದ ವಿ.ಎಂ. ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಜು. 21ರಂದು ಸಂಜೆ 4ಕ್ಕೆ ನಿಜಸುಖಿ ಶರಣ ಹಡಪದ ಅಪ್ಪಣ್ಣನವರ ಜಯಂತಿ ಅಂಗವಾಗಿ ಉಪನ್ಯಾಸ ಆಯೋಜಿಸಲಾಗಿದೆ.
ಸವದತ್ತಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಸಂಶೋಧಕ ಡಾ. ಬಾಳಪ್ಪ ಚಿನಗುಡಿ ಅವರು ಉಪನ್ಯಾಸ ನೀಡುವರು. ಧಾರವಾಡ ಜಿಲ್ಲಾ ಹಡಪದ ಅಪ್ಪಣ್ಣ ಸೇವಾ ಸಂದ ಗೌರವಾಧ್ಯ ಮಹಾರುದ್ರಪ್ಪ ಪಡೇಸೂರ, ಹುಬ್ಬಳ್ಳಿ ತಾಲೂಕಾಧ್ಯ ಮಾರುತಿ ಭರಮಪ್ಪ ಹಡಪದ, ಮಹಿಳಾ ಟಕದ ತಾಲೂಕಾಧ್ಯ ಶಾಂತವ್ವ ಶಿವಾನಂದ ಹಡಪದ ಅವರು ಅತಿಥಿಗಳಾಗಿ ಭಾಗವಹಿಸುವರು.
ಬಸವ ಕೇಂದ್ರದ ಅಧ್ಯ ಪ್ರೊ. ಜಿ.ಬಿ. ಹಳ್ಯಾಳ ಅಧ್ಯತೆ ವಹಿಸುವರು. ಬಸವಾಭಿಮಾನಿಗಳು
ಭಾಗವಹಿಸಬೇಕೆಂದು ಬಸವ ಪರಿಸರ ಸಂರಣಾ ಸಮಿತಿಯ ಕಾರ್ಯದರ್ಶಿ ಡಾ. ಸುರೇಶ ಹೊರಕೇರಿ ಕೋರಿದ್ದಾರೆ.