

ಮೈಸೂರು: ಸಾಮಾಜಿಕ ತಾರತಮ್ಯ, ಮೌಢ್ಯಗಳನ್ನು ತೊಡೆಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ಆದರ್ಶವಾಗಿವೆ ಎಂದು ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್ ಅಭಿಪ್ರಾಯಪಟ್ಟರು.
ಹೊಯ್ಸಳ ಟ್ರಸ್ಟ್‌ನಿಂದ ಚಾಮರಾಜಪುರಂನಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣನವರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಅಪ್ಪಣ್ಣ ಅವರ ತತ್ವ ಸಿದ್ಧಾಂತಗಳಿಗೆ ಗೌರವ ನೀಡೋಣ ಅಷ್ಟು ಶರಣ ಗಣಗಳಲ್ಲಿ - ಅಪ್ಪಣ್ಣನವರು ನಿಜಶರಣ ಹಾಗೂ ಅವರು ಯೋಗ್ಯ ವ್ಯಕ್ತಿ ಎಂದು ಅವರನ್ನು ಬಣ್ಣಿಸಿದರು.
ಹೊಯ್ಸಳ ಟ್ರಸ್ಟ್ ಅಧ್ಯಕ್ಷ ರಾಜೇಶ್ ಪಳನಿ, ಮುಖಂಡರಾದ ಜಿ ರಾಘವೇಂದ್ರ, ವರುಣ ಮಹದೇವ್, ಗೋಬಿ ನಾಗರಾಜ್, ಕಡಕೋಳ ಶಿವಲಿಂಗು, ಲೋಕೇಶ್ ರವಿಚಂದ್ರ, ಸೈಯದ್ ಅಹಮದ್, ಎಸ್ ಎನ್. ರಾಜೇಶ್, ದುರ್ಗಾ ಪ್ರಸಾದ್ ಇತರರು ಇದ್ದರು.