ನದಿಯಲ್ಲಿ ಈಜಲು ಹೋದವರು ನೀರುಪಾಲು

IMG-20250308-WA0057
Published on

ಹೂವಿನಹಡಗಲಿ: ತಾಲೂಕಿನ ಮದಲಗಟ್ಟಿಯಲ್ಲಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರುಪಾಲಾದ ಘಟನೆ ಶನಿವಾರ ನಡೆದಿದೆ.

ಗದಗ ಜಿಲ್ಲೆ ಶಿರಹಟ್ಟಿಯ ಗುರುನಾಥ ಬಡಿಗೇರ (28), ಶರಣಪ್ಪ ಬಡಿಗೇರ (24), ಮಹೇಶ ಬಡಿಗೇರ (26), ನೀರುಪಾಲಾದವರು.

ಗೆಳೆಯರೊಬ್ಬರ ಹುಟ್ಟುಹಬ್ಬವನ್ನು ಆಚರಿಸಲು ಐದುಜನ ಗೆಳೆಯರು ಒಟ್ಟುಗೂಡಿ ಮದಲಗಟ್ಟಿಯಲ್ಲಿ ಆಂಜನೇಯ ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ನದಿಯಲ್ಲಿ ಈಜಲು ತೆರಳಿದ್ದಾರೆ. ಈಜು ಬಾರದ ಮಹೇಶ ಬಡಿಗೇರ ನದಿ ನೀರಿನ ರಭಸಕ್ಕೆ ಸಿಲುಕಿ ಮುಳುಗುತ್ತಿದ್ದರು ಈ ಸಂದರ್ಭದಲ್ಲಿ ಗುರುನಾಥ ಹಾಗೂ ಶರಣಪ್ಪ ಇಬ್ಬರು ರಕ್ಷಿಸಲು ತೆರಳಿದಾಗ ಮೂರವರೂ ನದಿಯಲ್ಲಿ ಮುಳುಗಿದ್ದಾರೆ. ಸ್ಥಳದಲ್ಲಿದ್ದ ಗೆಳೆಯರು ಅಳುವ ಶಬ್ದ ಕೇಳಿದಾಗ ಗ್ರಾಮಸ್ಥರು ಸೇರಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಸ್ಥಳೀಯ ಮೀನುಗಾರರು ಸೇರಿ ಶೋಧ ಕಾರ್ಯ ನಡೆಸಿದ್ದಾರೆ‌. ಸ್ಥಳಕ್ಕೆ ಹೂವಿನಹಡಗಲಿ, ಮುಂಡರಗಿ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net