ಹಡಗಲಿಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಿ, ಹಸಿರು ಸೇನೆ, ರೈತ ಸಂಘ ಒತ್ತಾಯ

030120 Hadagali Farmers Appeal
Published on

ಹೂವಿನಹಡಗಲಿ: ಪಟ್ಟಣದಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಹಸಿರು ಸೇನೆ, ರೈತ ಸಂಘದಿಂದ ಶುಕ್ರವಾರ ತಹಸೀಲ್ದಾರ್ ಕೆ.ರಾಘವೇಂದ್ರರಾವ್‌ಗೆ ಮನವಿ ಸಲ್ಲಿಸಲಾಯಿತು. ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲೂಕಿನಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಿಲ್ಲ. ಹೂವಿನಹಡಗಲಿ ತಾಲೂಕು ಭೌಗೋಳಿಕವಾಗಿ ಅನುಕೂಲವಾಗಿದೆ. ತೊಗರಿ ದಾಸ್ತಾನು ಮಾಡಲು ಗೋದಾಮುಗಳಿವೆ. ಕೂಡಲೇ ಖರೀದಿ ಕೇಂದ್ರ ಆರಂಭಿಸಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗಂಗಾಧರ, ಮುಖಂಡರಾದ ಹೊಳಗುಂದಿ ಎಂ.ಗುರುಸಿದ್ದಪ್ಪ, ಎಚ್.ಎಂ.ಮಲ್ಲಿಕಾರ್ಜುನ, ಅಜ್ಜಪ್ಪ, ಎಚ್.ಹುಲುಗೇಶ, ಯು.ಎಂ.ಅಂದಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net