ಹಡಗಲಿಯಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದ ವೃದ್ಧನಿಗೆ ವೈರಸ್, ಚಿಕಿತ್ಸೆಗೆ ದಾಖಲಾಗಿದ್ದ ಆಸ್ಪತ್ರೆ ಸಿಬ್ಬಂದಿ ಹೋಂ ಕ್ವಾರಂಟೈನ್

Hadagali Corona Positive Life line Hospital Visit
ಹೂವಿನಹಡಗಲಿಯಲ್ಲಿ ಸೋಂಕಿತ ಚಿಕಿತ್ಸೆ ಪಡೆದಿದ್ದ ಲೈಫ್‌ಲೈನ್ ಆಸ್ಪತ್ರೆಗೆ ಹರಪನಹಳ್ಳಿ ಎಸಿ ಪ್ರಸನ್ನಕುಮಾರ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
Published on

ಹೂವಿನಹಡಗಲಿ: ಪಟ್ಟಣ ಸೇರಿ ತಾಲೂಕಿನಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ಹರಪನಹಳ್ಳಿ ಎಸಿ ಪ್ರಸನ್ನಕುಮಾರ್ ಹೇಳಿದರು. ಪಟ್ಟಣದ ಮಹಾವೀರ ಕಾಲನಿ, ಲೈಫ್‌ಲೈನ್ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಬಳಿಕ ಮಾತನಾಡಿದರು.

ಮಹಾವೀರ ನಗರದ 73 ವರ್ಷದ ವೃದ್ಧನಿಗೆ ಕರೊನಾ ತಗುಲಿದ್ದು, ಟ್ರಾವೆಲ್ ಹಿಸ್ಟರಿ ಇಲ್ಲದಿರುವುದು ಆಶ್ಚರ್ಯ ಮೂಡಿಸಿದೆ. ಈ ಕುರಿತು ಪರಿಶೀಲಿಸಲು ತಂಡ ರಚಿಸಲಾಗಿದೆ. ಮಹಾವೀರ ನಗರದ 20 ಮನೆ ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೆ ಈತ ಚಿಕಿತ್ಸೆಗೆ ದಾಖಲಾಗಿದ್ದ ಲೈಫ್‌ಲೈನ್ ಆಸ್ಪತ್ರೆಯ 30 ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. 7 ದಿನ ಆಸ್ಪತ್ರೆ ಹಾಗೂ ಅದರ ಪಕ್ಕದಲ್ಲಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್, ಮಹೇಂದ್ರ ಶೋ ರೂಮ್ ಸೀಲ್‌ಡೌನ್ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ತೋರಣಗಲ್‌ನಲ್ಲಿ ಆಟೋ ಚಾಲಕನಾಗಿದ್ದ ಅಡವಿಮಲ್ಲನಕೇರಿ ತಾಂಡಾದ ಯುವಕನಿಗೂ ಸೋಂಕು ಹರಡಿದೆ. ತಾಂಡಾದಲ್ಲಿ 30 ಮನೆ ಸೀಲ್‌ಡೌನ್ ಮಾಡಲಾಗಿದೆ. ಕುರುವತ್ತಿ ಗ್ರಾಮದಲ್ಲಿ 18 ವರ್ಷದ ಯುವತಿಗೆ ವೈರಸ್ ತಗುಲಿದ್ದು, ಗ್ರಾಮದಲ್ಲಿ 50 ಮೀ. ವ್ಯಾಪ್ತಿ ಪ್ರದೇಶ ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಕೆ.ವಿಜಯಕುಮಾರ್, ಟಿಎಚ್‌ಒ ಶಿವಕುಮಾರ್ ಸಾಲಗಿ, ತಾಪಂ ಇಒ ಯು.ಎಚ್.ಸೋಮಶೇಖರ್, ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ಆರೋಗ್ಯ ಅಧಿಕಾರಿ ಶ್ರೀನಿವಾಸ, ಒಬಿಸಿ ಇಲಾಖೆ ಅಧಿಕಾರಿ ಎಂಪಿಎಂ ಅಶೋಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net