ಶಾಲೆಯಲ್ಲಿ ಕಲಿಕಾ ವಾತಾವರಣ ಸೃಷ್ಟಿಸಿ

20-dsbr-hdl-02
Published on

ಹೂವಿನಹಡಗಲಿ: ಮಾನ್ಯರಮಸಲವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಗ್ರಾಮಸ್ಥರು ಸಹಕಾರದೊಂದಿಗೆ ಶಾಲಾ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಶಾಲಾ ಆವರಣದಲ್ಲಿ ಶೌಚಗೃಹಗಳಿಲ್ಲ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಶೌಚಕ್ಕಾಗಿ ಬಯಲಿಗೆ ಹೋಗಬೇಕಾಗಿದೆ. ಅಡುಗೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಅಡುಗೆ ತಯಾರಿಸುತ್ತಿಲ್ಲ. ಶಾಲಾ ಆವರಣ ಮದ್ಯ ವ್ಯಸನಿಗಳ ತಾಣವಾಗಿದೆ. ಶಾಲೆಗೆ ಬೆಳಗ್ಗೆ ಬಂದಾಗ ಬಾಟಲಿಗಳನ್ನು ತೆರವುಗೊಳಿಸಬೇಕಗಿದೆ. ಇನ್ನು ಶಾಲಾ ಆವರಣದಲ್ಲಿಯೇ ಕಿಡಿಗೇಡಿಗಳು ಮಲ, ಮೂರ್ತ ವಿಸರ್ಜನೆ ಮಾಡಿ ಗಲೀಜು ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಕರು ಸರಿಯಾದ ಸಮಯಕ್ಕೆ ತರಗತಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಶಾಲೆಯಲ್ಲಿ ಕಲಿಕಾ ವಾತಾವರಣವಿಲ್ಲ. ಸ್ಥಳಕ್ಕೆ ಬಿಇಒ ಅವರು ಬರಬೇಕು ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಬಿಇಒ ಮಹೇಶ್ ಪೂಜಾರ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಮನವೊಲಿಸಿ, ಶಾಲೆಗಳು ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಮುಖ್ಯ. ಎಲ್ಲರೂ ಶಾಲೆಯ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಬೇಕು. ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net