ಅಕ್ರಮವಾಗಿ ಪಟಾಕಿ ಮಾರಾಟ, ದಾಳಿ

Hadagali Fairworks
ಹೂವಿನಹಡಗಲಿಯ ಸೋಗಿ ವೃತ್ತದ ಶೆಡ್‌ನಲ್ಲಿ ಅಕ್ರಮವಾಗಿ ಪಟಾಕಿಗಳನ್ನು ಸಂಗ್ರಹಿಸಿಟ್ಟ ಅಡ್ಡೆ ಮೇಲೆ ತಹಸೀಲ್ದಾರ್ ಕೆ.ಶರಣಮ್ಮ ಹಾಗೂ ಪಿಎಸ್‌ಐ ವಿಜಯಕೃಷ್ಣ ಬುಧವಾರ ದಾಳಿ ನಡೆಸಿ ಪರಿಶೀಲನೆ ಮಾಡಿದರು.
Published on

ಹೂವಿನಹಡಗಲಿ: ಪಟ್ಟಣದ ಸೋಗಿ ರಸ್ತೆಯಲ್ಲಿ ಅಕ್ರಮವಾಗಿ ಪಟಾಕಿಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ತಹಸೀಲ್ದಾರ್ ಕೆ.ಶರಣಮ್ಮ ನೇತೃತ್ವದಲ್ಲಿ ಪೊಲೀಸರು ಬುಧವಾರ ಸಂಜೆ ದಾಳಿ ನಡೆಸಿ, ಸಿಡಿಮದ್ದುಗಳನ್ನು ವಶಕ್ಕೆ ಪಡೆದರು.

ಪಟ್ಟಣದ ರಮೇಶ ಎಂಬುವವರು ಸೋಗಿ ವೃತ್ತದ ಬಳಿ ಇರುವ ಶೆಡ್‌ನಲ್ಲಿ ಪರವಾನಗಿ ಇಲ್ಲದೆ ಪಟಾಕಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಕೆ.ಶರಣಮ್ಮ ಮತ್ತು ಪಿಎಸ್‌ಐ ವಿಜಯಕೃಷ್ಣ ದಾಳಿ ಮಾಡಿ 37 ಸಾವಿರ ರೂ.ಗಿಂತ ಹೆಚ್ಚು ಮೊತ್ತದ ಸಿಡಿಮದ್ದುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net