

ಹೂವಿನಹಡಗಲಿ: ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಡಾ.ದರ್ಶನ್ ಹೇಳಿದರು.
ತಾಲೂಕಿನ ಮೈಲಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ, ಚಿರಂಜೀವಿ ರಕ್ತ ಭಂಡಾರದ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಅಪಘಾತದ ಸಂದರ್ಭದಲ್ಲಿ ಹೆಚ್ಚು ರಕ್ತಸ್ರಾವ ಆದವರಿಗೆ ಹಾಗೂ ಗರ್ಭಿಣಿಯರಿಗೆ ರಕ್ತದಾನದ ಅವಶ್ಯಕತೆ ಇರುತ್ತದೆ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಜಾನಕಮ್ಮ ತಳವಾರ ಉದ್ಘಾಟಿಸಿದರು. 26 ಜನರು ರಕ್ತದಾನ ಮಾಡಿದರು. ಸೀನಿಯರ್ ಐಸಿಟಿಸಿ ಕೌನ್ಸಲರ್ ವೀರೇಶ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಚನ್ನಪ್ಪನಾಯ್ಕ, ರಕ್ಷಿತಾ, ಚೇತನ, ಮಲ್ಲಪ್ಪ, ಗ್ರಾಪಂ ಸದಸ್ಯರಾದ ಮಾಲತೇಶ ಡಂಬಳ, ಮಲ್ಲಿಕಾರ್ಜುನ ಗುಡಗೂರು, ಮಾಲತೇಶ ಕಂಚಾವೀರ ಇತರರಿದ್ದರು.