

ಹೂವಿನಹಡಗಲಿ: ಪಟ್ಟಣದ ಬಸವಪ್ರಭು ಬಡಾವಣೆಯಲ್ಲಿ ಕೃಷಿ ಇಲಾಖೆ ಅಧೀಕ್ಷಕ ಅಕ್ಕಿ ರಮೇಶ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಂಪ್ಯೂಟರ್ ಮತ್ತು ಪ್ರಿಂಟರ್ ಸೇರಿ ಇತರ ಸಾಮಗ್ರಿ ಸುಟ್ಟಿವೆ. ಅಕ್ಕಿ ರಮೇಶ ಅವರು ಶುಕ್ರವಾರ ಮನೆಗೆ ಕೀಲಿಹಾಕಿ ಊರಿಗೆ ಹೋಗಿದ್ದರು.
ಶನಿವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮನೆಯಿಂದ ಹೊಗೆ ಹೊರಬಂದಿದೆ. ಇದರಿಂದ ಗಾಬರಿಗೊಂಡ ಅಕ್ಕ-ಪಕ್ಕದ ನಿವಾಸಿಗಳು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮನೆ ಬೀಗ ಮುರಿದು ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.