

ಹೂವಿನಹಡಗಲಿ: ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರತಿ ಹಳ್ಳಿಯಲ್ಲಿ ಶಾಖೆಗಳನ್ನು ತೆರೆಯುವ ಮೂಲಕ 40 ಕೋಟಿ ರೂ.ಗೂ ಹೆಚ್ಚು ವಹಿವಾಟನ್ನು ಹೊಂದಿದೆ ಎಂದು ಹೊಸಪೇಟೆ ಪ್ರಾದೇಶಿಕ ವ್ಯವಸ್ಥಾಪಕ ನೀರಜ್ ಕುಮಾರ ಹೇಳಿದರು.
ಹೊಳಲು ಗ್ರಾಮದಲ್ಲಿ ಕೆಜಿಬಿ ನೂತನ ಶಾಖೆಯ ಕಟ್ಟಡ ಉದ್ಘಾಟಿಸಿ ಶನಿವಾರ ಮಾತನಾಡಿದರು. 2015ರ ಮಾ.9 ರಂದು ಆರಂಭವಾದ ಬ್ಯಾಂಕ್ ಸಾಕಷ್ಟು ವಹಿವಾಟನ್ನು ನಡೆಸುತ್ತಿದೆ.
ಗ್ರಾಮೀಣ ಭಾಗದ ಶಾಖೆಗಳು ಹೆಚ್ಚು ವಹಿವಾಟು ನಡೆಸಲು ಗ್ರಾಹಕರು ಹಾಗೂ ಸಿಬ್ಬಂದಿ ಕಾರಣ. ಸಿಬ್ಬಂದಿ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ಬ್ಯಾಂಕಿಗೆ ಸಂಬಂಧಿಸಿದ ಅವರ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದರು.
ಹೊಸಪೇಟೆ ಶಾಖೆಯ ಸಹಾಯಕ ವ್ಯವಸ್ಥಾಪಕ ಮನೋಹರ, ಹೊಳಲು ಶಾಖೆಯ ವ್ಯವಸ್ಥಾಪಕ ಆರ್.ರಮೇಶ, ಸಹಾಯಕ ವ್ಯವಸ್ಥಾಪಕ ಅವಿನಾಶ, ಕ್ಯಾಶಿಯರ್ ವಿಕ್ರಮ, ಶಿವನಾಗಪ್ಪ ಗಂಧೂಡಿ ಇತರರಿದ್ದರು.