ಕೌಡ್ಲೆಯಲ್ಲಿ ಪಟ್ಟಲದಮ್ಮ ಹಬ್ಬ ಸಂಪನ್ನ

Temple)
Published on

ಮದ್ದೂರು: ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಪಟ್ಟಲದಮ್ಮ ಮತ್ತು ತೊರೆಹಳ್ಳದಮ್ಮನ ಹಬ್ಬ, ಜಾತ್ರಾ ಮಹೋತ್ಸವ ಭಾನುವಾರ ಸಂಪನ್ನಗೊಂಡಿತ್ತು.

ಪ್ರಧಾನ ಅರ್ಚಕ ನವೀನ್ ಗೋಪಾಲ್ ನೇತೃತ್ವದಲ್ಲಿ ಶುಕ್ರವಾರ ದೇವಸ್ಥಾನದಲ್ಲಿ ಧಾರ್ಮಿಕ ಕೈಂಕರ್ಯ ನಡೆಯುವುದರ ಜತೆಗೆ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಮರುದಿನ ಬೆಳಗಿನ ಜಾವದವರೆಗೆ ದೇವರ ಮೆರವಣಿಗೆ ನಡೆದು ಕೊಂಡ ಹಾಯಲಾಯಿತು. ಅಂತೆಯೇ ಸಂಜೆ ಪೂಜಾ ಕುಣಿತ, ವೀರಗಾಸೆ ನೃತ್ಯ, ಆರತಿ, ಪಲ್ಲಕ್ಕಿ ಉತ್ಸವ ಮಾಡಲಾಯಿತು. ಇನ್ನು ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅದ್ದೂರಿ ಜಾತ್ರೋತ್ಸವ ನಡೆಯಿತು. ಭಾನುವಾರ ದೇವಿಗೆ ಬೆಳ್ಳಿ ಅಲಂಕಾರ, ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net