

ಹನುಮಸಾಗರ: ಸಮೀಪದ ಹಾಬಲಕಟ್ಟಿ ಗ್ರಾಮದಲ್ಲಿ ಮಂಗಳವಾರ ಹಸೇನ ಹುಸೇನ ಆಶ್ರುಖಾನೆಯನ್ನು ಗಣ್ಯರು ಉದ್ಘಾಟಿಸಿದರು.
ಮುಖ್ಯಮಂತ್ರಿ ಗ್ರಾಮವಿಕಾಸ್ ಯೋಜನೆಯಡಿ 2014-15ನೇ ಸಾಲಿನಲ್ಲಿ 1 ಕೋಟಿ ಅನುದಾನ ಗ್ರಾಮಕ್ಕೆ ಮಂಜೂರ ಮಾಡಲಾಗಿತ್ತು. ಅದರಲ್ಲಿ 6 ಲಕ್ಷ ಅನುದಾನವನ್ನು ಮೀಸಡಲಾಗಿತ್ತು. ಇದರೊಂದಿಗೆ ಸ್ಥಳೀಯ ಹಾಗೂ ವಿವಿಧ ಗ್ರಾಮಸ್ಥರಿಂದ 6 ಲಕ್ಷ ದೇಣಿಗೆ ಸಂಗ್ರಹಿಸಿ, ಒಟ್ಟು 12 ಲಕ್ಷ ರೂ. ಆಶ್ರುಖಾನೆ ನಿರ್ಮಿಸಲಾಗಿದೆ. ಗ್ರಾಮದಲ್ಲಿ ಎರಡು ಕುಟುಂಬಗಳು ಮಾತ್ರ ಮುಸ್ಲಿಂ ಸಮುದಾಯ ನೆಲೆಸಿದ್ದಾರೆ.
ಮುಖಂಡರಾದ ಮೈನೂದ್ದೀನ್ ಖಾಜಿ, ನಿವೃತ್ತ ಪಿಎಸ್‌ಐ ಮಾರ್ತಾಂಡಪ್ಪ ಭೋವಿ, ಬಸವರಾಜ ಪಾಟೀಲ್, ಹೊನ್ನಪ್ಪ ನಾಗರಾಳ, ನಾಗಪ್ಪ ರಾಜೂರ, ಕೆಂಚಪ್ಪ ಗುರಿಕಾರ, ಬಸಪ್ಪಜ್ಜ ಗುರಿಕಾರ, ಬಾಬು ಅತ್ತಾರ, ಲಾಲಸಿ ಮುರಡಿ, ಸೋಮಪ್ಪ ಗುರಿಕಾರ, ಚಂದಾಲಿಂಗಪ್ಪ ಹವಾಲ್ದಾರ, ಬಸಪ್ಪ ಹವಾಲ್ದಾರ, ಶಿವಾನಂದ ಗುರಿಕಾರ, ಕಲ್ಲನಗೌಡ ಪೊಲೀಸ್‌ಪಾಟೀಲ್, ಯಲ್ಲಪ್ಪ ಗಾಜಿ, ಭೀಮಪ್ಪ ಭೋವಿ, ಭೀಮಜ್ಜ ವಾಲಿಕಾರ, ಪರಶುರಾಮ ಮುಗಳಿ, ಶೇಖಪ್ಪ ಭಜಂತ್ರಿ, ಹನುಮಂತ ಗುರಿಕಾರ, ಶರಣಪ್ಪ ನಾಗರಾಳ, ಯಮನೂರು ಗುರಿಕಾರ ಇತರರಿದ್ದರು.