ಹೆಚ್.ಟಿ. ಅನಿಲ್ ರಚಿತ ಪುಸ್ತಕ ಬಿಡುಗಡೆ

H.T. Book launch by Anil
Published on

ಮಡಿಕೇರಿ:

 ಶ್ರೀರಾಮ ತನ್ನ ಜೀವನದುದ್ದಕ್ಕೂ ಪ್ರತಿಪಾದಿಸುತ್ತಾ ಅನುಸರಿಸುತ್ತಿದ್ದ ಆದಶ೯ ಮತ್ತು ಪ್ರೀತಿಯ ಅಂಶಗಳಿಂದಾಗಿ ಅವನನ್ನು ಭಾರತ ಮಾತ್ರವಲ್ಲ, ವಿಶ್ವದಾದ್ಯಂತ ಅನೇಕ ದೇಶಗಳು ಆರಾಧಿಸಲು ಕಾರಣವಾಗಿದೆ ಎಂದು ಖ್ಯಾತ ಸಾಹಿತಿ ಡಾ.ಗಜಾನನ ಶಮ೯   ಅಭಿಪ್ರಾಯಪಟ್ಟರು. ಶುಕ್ರವಾರ ಸಂಜೆ    ಪತ್ರಕತ೯ ಅನಿಲ್ ಹೆಚ್ .ಟಿ. ಬರೆದ  ‘ಅಯೋಧ್ಯೆ ಶ್ರೀರಾಮನ ಮಂದಿರ, ಇದು ಪ್ರೀತಿಯ ಮಂದಿರ, ರಾಷ್ಟ್ರಮಂದಿರ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಶ್ರೀರಾಮನನ್ನು ಮನಸ್ಸಿಗೆ ಹಚ್ಚಿಕೊಂಡಲ್ಲಿ ಆತನಲ್ಲಿದ್ದ ಮಾನವ ಗುಣದ ಅನೇಕ ಋಣಾತ್ಮಕತೆಗಳ ಬಗ್ಗೆ ಪ್ರಶ್ನೆ ಮೂಡಬಹುದು. ಆದರೆ ಶ್ರೀರಾಮನನ್ನು ಹೖದಯದಲ್ಲಿ ಇರಿಸಿಕೊಂಡಾಗ ಮಾತ್ರ ಆತನ ಉತ್ತಮ ಗುಣಗಳನ್ನು ಜೀವನದಲ್ಲಿ ಅನುಸರಿಸಲು ಸಾಧ್ಯವಾಗುತ್ತದೆ. ಎಂತಹ ಕಷ್ಟವನ್ನಾದರೂ ನಗುಮೊಗದಿಂದಲೇ ಸ್ವೀಕರಿಸಬೇಕು ಎಂಬ ಗುಣವನ್ನು ಕಲಿಸಿಕೊಟ್ಟವನು ರಘುರಾಮ.  ಜಗದೇಕ  ಸುಂದರಿಯಾಗಿ ಬಂದ ಶೂರ್ಪನಖಿ ಹಾಗೂ ಲಂಕೆಯ ಸಿಂಹಾಸನದ ಸೆಳೆತಗಳಿಗೆ  ಕೂಡ ಶ್ರೀರಾಮ  ಒಳಗಾಗಲಿಲ್ಲ. ಅಶ್ವಮೇಧ ಯಾಗ ಮಾಡುವಾಗ ಎಲ್ಲರೂ ಮತ್ತೊಂದು ಮದುವೆಯಾಗು ಎಂದಾಗಲೂ ಅದನ್ನೊಪ್ಪದೇ ತಾನು ನಂಬಿದ್ದ  ಸೀತೆಯ ಪ್ರತಿಮೆಯನ್ನೇ ಪಕ್ಕದಲ್ಲಿರಿಸಿಕೊಂಡವ ರಾಮ. ಆತನ ಕಣ್ಣಿಗೆ ಅಳಿಲಿನ ಸೇವೆ, ಕಡು ಬಡವಿ ಶಬರಿಯ ಭಕ್ತಿಯೂ ಕಂಡಿತ್ತು.  ಸೇವಕನಿಗೂ ತನ್ನ ಕುಟುಂಬದಲ್ಲಿ ಸ್ಥಾನ ಕಲ್ಪಿಸಿದ. ರಾಮನ ಬದುಕೇ ಪ್ರೀತಿಯ ಬದುಕಾಗಿತ್ತು ಎಂದರು.

ಪತ್ರಕರ್ತ ಜಿ.ಚಿದ್ವಿಲಾಸ್ ಮಾತನಾಡಿ,  ಅನಿಲ್ ಬರಹದಲ್ಲಿ ವಿನೂತನ ಶೈಲಿಯಿದೆ. ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಸ್ವಭಾವವೇ ಅನಿಲ್ ಬರಹಕ್ಕೆ ಸ್ಪೂತಿ೯ಯಾಗಿರುವುದು ವಿಶೇಷ ಎಂದರು. 

 ಕೖತಿಕಾರ ಅನಿಲ್ ಹೆಚ್.ಟಿ. ಮಾತನಾಡಿ,  ಅಯೋಧ್ಯೆಗೆ ಅನೇಕ ಬಾರಿ ತೆರಳಿದ್ದರೂ ಈಗ ದೇವನಗರಿಯಲ್ಲಿ ಆಗಿರುವ ಬದಲಾವಣೆ ಊಹೆಗೂ ನಿಲುಕದಂತಿದೆ. ಕೊಡಗಿನ ಜನತೆ ಕೂಡ 2,200 ಕಿಮೀ. ದೂರದ ಅಯೋಧ್ಯೆಯಲ್ಲಿನ ವಿದ್ಯಮಾನಗಳ ಬಗ್ಗೆ ಆಸಕ್ತಿ ವಹಿಸಿದ್ದು  ಅಯೋಧ್ಯೆ ಪುಸ್ತಕ ಪ್ರಕಟಣೆಗೆ ಕಾರಣವಾಯಿತು ಎಂದು ಹೇಳಿದರು. 

ಇದೇ ಸಂದಭ೯ ಖಾಸಗಿ ವಾಹಿನಿ ರಿಯಾಲಿಟಿ ಶೋ ಸ್ಪಧಿ೯, ಕೊಡಗಿನ  ಯುವ ಗಾಯಕ ಅನ್ವಿತ್ ಕುಮಾರ್ ಇನ್ನಷ್ಟು ಬೇಕೆನ್ನ ಹೖದಯಕ್ಕೆ ರಾಮ ಹಾಡನ್ನು ಸುಶ್ಯಾವ್ಯವಾಗಿ ಹಾಡು ಬರೆದ ಸಾಹಿತಿ ಮುಂದೆಯೇ ಹಾಡುವ ಮೂಲಕ  ಮೆಚ್ಚುಗೆಗೆ ಕಾರಣರಾದರು. 

ಲೇಖಕಿ ಕೆ.ಜಯಲಕ್ಷ್ಮಿ,  ಪತ್ರಕತ೯ ಕುಡೆಕಲ್ ಸಂತೋಷ್, ಉಪನ್ಯಾಸಕಿ ಪ್ರತಿಮಾ ಹರೀಶ್ ರೈ, ರೀನಾ ಅನಿಲ್ , ಎಸ್.ಎಸ್. ಸಂಪತ್ ಕುಮಾರ್ ಇದ್ದರು.

ಚಿತ್ರಾನಂಜಪ್ಪ, ಸಂಧ್ಯಾ ಚಿದ್ವಿಲಾಸ್, ವಂದನಾ ಪೊನ್ನಪ್ಪ ರಾಮಸ್ತುತಿ ಹಾಡಿದರು.

ಸಾಹಿತಿ ಡಾ.ಗಜಾನನ ಶಮಾ೯ , ನಾಗರತ್ನ ಶಮಾ೯ ದಂಪತಿಯನ್ನು  ಕೊಡಗಿನ ಜನತೆಯ ಪರವಾಗಿ ಹಿರಿಯ ಪತ್ರಕತ೯ ಜಿ.ರಾಜೇಂದ್ರ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ನಗರಸಭೆ ಅಧ್ಯಕ್ಷೆ ಅನಿತಾಪೂವಯ್ಯ, ಡಾ.ಎಂ.ಜಿ.ಪಾಟ್ಕರ್, ಹೆಚ್.ಎಸ್.ತಿಮ್ಮಪ್ಪಯ್ಯ ಸನ್ಮಾನಿಸಿ ಗೌರವಿಸಿದರು. ಲೇಖಕ ಅನಿಲ್ ಹೆಚ್.ಟಿ. ಅವರನ್ನು ಸಮಥ೯ ಕನ್ನಡಿಗ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net