

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಹೋಬಳಿಯ ಹೊಸಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಪಿ. ಸುರೇಶ್ ಹಾಗೂ ಉಪಾಧ್ಯಕ್ಷರಾಗಿ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮದ ಡೇರಿ ಸಹಕಾರ ಸಂಘಕ್ಕೆ 10 ನಿರ್ದೇಶಕರು ಆಯ್ಕೆಯಾಗಿದ್ದು, ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಎಚ್. ಪಿ. ಸುರೇಶ್ ಮತ್ತು ವೆಂಕಟೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಎಚ್.ವೆಂಕಟೇಶ್‌ಮೂರ್ತಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಮನ್ಮುಲ್ ಉಪಾಧ್ಯಕ್ಷ ಕೃಷ್ಣೇಗೌಡ, ಮುಖಂಡರಾದ ಬಿ.ಕೆ.ರವೀಂದ್ರಕುಮಾರ್, ಪುಟ್ಟಸ್ವಾಮಿ, ದೇವರಾಜು, ಸಂಘದ ನಿರ್ದೇಶಕರಾದ ಎಚ್.ಎಂ.ಕುಮಾರ್, ಬಿ.ಪ್ರಭು, ಗುರುಸ್ವಾಮಿ, ಎನ್.ಮಧುಮಾಲಿನಿ, ಮೇಲ್ವಿಚಾರಕಿ ಎಸ್. ಎನ್. ರೇಖಾ, ಕಾರ್ಯದರ್ಶಿ ಎಚ್. ಹೊಂಬಾಳೇಗೌಡ ಇತರರಿದ್ದರು.