ಹೆಬ್ರಿ: ಹೆಬ್ರಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಸುವರ್ಣ ಸಂಭ್ರಮದಲ್ಲಿದ್ದು ಸಮಿತಿಯ ಅಧ್ಯಕ್ಷರಾಗಿ ಎಚ್.ಜನಾರ್ದನ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಎಚ್.ರಾಜೇಶ ಆಚಾರ್ಯ ಮಠದಬೆಟ್ಟು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಎಚ್.ಗುಂಡೂ ನಾಯಕ್, ಎಚ್.ಭಾಸ್ಕರ ಜೋಯಿಸ್, ಎಚ್.ಪ್ರವೀಣ್ ಬಲ್ಲಾಳ್, ಎಚ್.ಯೋಗೀಶ ಭಟ್, ಉಪಾಧ್ಯಕ್ಷರಾಗಿ ಪ್ರಕಾಶ ಮಲ್ಯ, ದಿವಾಕರ ಶೆಟ್ಟಿ, ಎಚ್.ಕೆ.ಸುಧಾಕರ್, ಜೊತೆ ಕಾರ್ಯದರ್ಶಿಯಾಗಿ ಶಂಕರ ಶೇರಿಗಾರ್, ಕೋಶಾಧಿಕಾರಿ ದೇವಾನಂದ ನಾಯಕ್ ಆಯ್ಕೆಯಾಗಿದ್ದಾರೆ.
ಗಣೇಶೋತ್ಸವದ ಸುವರ್ಣ ಸಂಭ್ರಮದ ಯಶಸ್ಸಿಗಾಗಿ ಹಲವರನ್ನು ಮಾರ್ಗದರ್ಶಕರು, ಗೌರವ ಸಲಹೆಗಾರರರು, ಸದಸ್ಯರನ್ನು ಆಯ್ಕೆ ಮಾಡಲಾಗಿದೆ. 19 ಉಪ ಸಮಿತಿಗಳನ್ನು ರಚಿಸಿಲಾಗಿದೆ. ಪ್ರವೀಣ್ ಕುಮಾರ್ ಚೈತನ್ಯ ಯುವ ವೃಂದ, ಪ್ರಸಾದ್ ಶೆಟ್ಟಿ, ವಿಜೇಂದ್ರ ಶೆಟ್ಟಿ, ಸುಕುಮಾರ್ ಮುನಿಯಾಲ್, ಸಂತೋಷ ನಾಯಕ್, ಸುದೀಪ್ ಭಟ, ಎಚ್.ನಾಗರಾಜ ಜೋಯಿಸ್, ಅರುಣ್ ಹೆಗ್ಡೆ, ಕರುಣಾಕರ ದೇವಾಡಿಗ, ವಸಂತ ಶೆಟ್ಟಿ ನಡುಬೀಡು, ಪ್ರಕಾಶ ಶೆಟ್ಟಿ ಕಲ್ಲಿಲ್ಲು, ಮುದ್ದು ಪೂಜಾರಿ, ಟಿ.ಜಿ.ಆಚಾರ್ಯ, ಉಮೇಶ ನಾಯಕ್, ಸುಧಾಕರ ಹೆಗ್ಡೆ, ವಿಜಯ ಹೆಗ್ಡೆ, ಮುದ್ದುಕೃಷ್ಣ, ಸುಂದರ ಪೂಜಾರಿ ಹಾಗೂ ನಿತ್ಯಾನಂದ ಶೆಟ್ಟಿ ಅವರನ್ನು ವಿವಿಧ ಸಮಿತಿಗಳಿಗೆ ಆಯ್ಕೆ ಮಾಡಲಾಯಿತು.