ಎಚ್.ಬಿ.ಯಶವಂತಗೌಡ ಹಿರೇಮರಳಿ ಗ್ರಾಪಂ ಉಪಾಧ್ಯಕ್ಷ

8-pnp 2
ಹಿರೇಮರಳಿ ಗ್ರಾಪಂ ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎಚ್.ಬಿ.ಯಶವಂತಗೌಡ ಅವರನ್ನು ಸದಸ್ಯರು ಅಭಿನಂದಿಸಿದರು. ಎಸ್.ಚೇತನಾ, ಜಯಲಕ್ಷ್ಮೀ, ವಿ.ಶ್ವೇತಾ, ಸಿ.ರತ್ನಮ್ಮ, ಹೇಮಲತಾ ಇತರರು ಇದ್ದರು.
Published on

ಪಾಂಡವಪುರ: ತಾಲೂಕಿನ ಹಿರೇಮರಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಎಚ್.ಬಿ.ಯಶವಂತಗೌಡ(ಪುಟ್ಟ) ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ಅಧಿಕಾರ ಒಡಂಬಡಿಕೆಯಂತೆ ಎಚ್.ಎನ್.ನವೀನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದು, ಆ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಒಟ್ಟು 20 ಸದಸ್ಯ ಬಲವಿರುವ ಗ್ರಾಪಂನಲ್ಲಿ 15 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಯಶವಂತಗೌಡ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಜಯರಾಮು ಅವಿರೋಧ ಆಯ್ಕೆ ಘೋಷಣೆ ಮಾಡಿದರು.ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು, ಹಿತೈಷಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಗ್ರಾಪಂ ಅಧ್ಯಕ್ಷ ಎಸ್.ಚೇತನಾ, ಸದಸ್ಯರಾದ ಜಯಲಕ್ಷ್ಮೀ, ವಿ.ಶ್ವೇತಾ, ಸಿ.ರತ್ನಮ್ಮ, ಹೇಮಲತಾ, ಟಿ.ಎಂ.ಸವಿತಾ, ರಮೇಶಶೆಟ್ಟಿ, ಬಿ.ಸಿ.ರೇವಣ್ಣ, ಬಿ.ಸಿ.ಉಮಾ, ಬಿ.ಜೆ.ವಿಜಯಕುಮಾರ್, ಕುಮಾರಸ್ವಾಮಿ, ಬಿ.ಸಿ.ಸುನೀಲ್, ಕೃಷ್ಣೇಗೌಡ, ಮುಖಂಡರಾದ ಈರೇಗೌಡ, ಎಚ್.ಎನ್.ಮಂಜುನಾಥ್, ಶಿವಕುಮಾರ್, ಮಧು, ನಂದನ್, ರವಿ, ಭಾರ್ಗವಿ, ಚಂದ್ರು, ಲೋಕೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net