ಎಚ್​ಎಎಲ್ ಹೆಲಿಕಾಪ್ಟರ್​ ಶಕ್ತಿ ಪ್ರದರ್ಶನ

hal jan 31 2020
Published on

ಬೆಂಗಳೂರು: ಉತ್ತರಪ್ರದೇಶದ ಲಕ್ನೋದಲ್ಲಿ ಫೆ.5ರಿಂದ 9ರವರೆಗೆ ನಡೆಯಲಿರುವ ಡಿಎಫ್​ಎಕ್ಸ್​ಪೋ-2020ರಲ್ಲಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್​ಎಎಲ್) ಪ್ರಮುಖ ಪಾತ್ರ ವಹಿಸಲಿದೆ. ಲಾಜಿಸ್ಟಿಕ್ ಸಹಾಯ ನೀಡುವ ಜತೆಗೆ ಡಿಫೆನ್ಸ್ ಮತ್ತು ಏರೋಸ್ಪೇಸ್​ನಲ್ಲಿ ಎಚ್​ಎಎಲ್ ಮಾಡಿರುವ ಸಾಧನೆಯನ್ನು ಪ್ರದರ್ಶಿಸಲಿದೆ.

ಎಚ್​ಎಎಲ್ ಸಾಕಷ್ಟು ವರ್ಷಗಳಿಂದ ಈ ರೀತಿಯ ಎಕ್ಸ್​ಫೋಗಳನ್ನು ಆಯೋಜನೆ ಮಾಡಿಕೊಂಡು ಬಂದಿದೆ. ಲಘು ಯುದ್ಧ ವಿಮಾನ, ತೇಜಸ್, ಎಲ್​ಸಿಎಚ್, ಹಾಕ್​ಗಳನ್ನು ಪ್ರದರ್ಶಿಸಲಿದೆ. ಇದರೊಂದಿಗೆ ವಿಮಾನದ ಬಿಡಿ ಭಾಗಗಳು,

ಎಚ್​ಎಎಲ್​ನ ಉತ್ಪನ್ನವಾದ ಸ್ವದೇಶಿ ಡಿಜಿಟಲ್ ಮ್ಯಾಪ್ ಜನರೇಟರ್ ಸೇರಿ ನೂತನ ತಂತ್ರಜ್ಞಾನ ಉಪಕರಣ ಗಳನ್ನು ಪ್ರದರ್ಶಿಸಲಿದೆ.

ಜನರ ಆಕರ್ಷಣೆಗಾಗಿ ಸುಕೋಯ್- 30 ಎಂಕೆಐನ ಕಾಕ್​ಪಿಟ್ ಸಿಮ್ಯುಲೇಟರ್ ಹಾಗೂ ಹೋರಾಂಗಣದಲ್ಲಿ ರುದ್ರ ಹಾಗೂ ಇತರೆ ಹೆಲಿಕಾಪ್ಟರ್​ಗಳನ್ನು ಪ್ರದರ್ಶಿಸಲಿದೆ. ಇದರೊಂದಿಗೆ ವಿದೇಶಿ ಕಂಪನಿಗಳ ಜತೆಗೆ ಒಪ್ಪಂದ ಸಹ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್​ಎಲ್​ನ ಸಿಎಂಡಿ ಮಾಧವನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net