ಅಥ್ಲೆಟಿಕ್ಸ್‌ನಲ್ಲಿ ಜ್ಞಾನಪ್ರಭ ಸ್ಕೂಲ್ ಉತ್ತಮ ಸಾಧನೆ

ತುಮಕೂರಿನಲ್ಲಿ ನಡೆದ ವಲಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಚಾಂಪಿಯನ್‌ಶಿಪ್ ಪಡೆದ ಹಿರೀಸಾವೆಯ ಜ್ಞಾನಪ್ರಭ ಇಂಟರ್ ನ್ಯಾಷನಲ್ ಶಾಲೆಯ ಬಾಲಕಿಯರನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.
ತುಮಕೂರಿನಲ್ಲಿ ನಡೆದ ವಲಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಚಾಂಪಿಯನ್‌ಶಿಪ್ ಪಡೆದ ಹಿರೀಸಾವೆಯ ಜ್ಞಾನಪ್ರಭ ಇಂಟರ್ ನ್ಯಾಷನಲ್ ಶಾಲೆಯ ಬಾಲಕಿಯರನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.
Published on

ಹಿರೀಸಾವೆ: ನವದೆಹಲಿಯ ಸಿಐಎಸ್‌ಸಿಈ ಬೋರ್ಡ್ ವತಿಯಿಂದ ಇತ್ತೀಚೆಗೆ ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಇಲ್ಲಿನ ಜ್ಞಾನಪ್ರಭ ಇಂಟರ್ ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳು ವಿವಿಧ ಸ್ವರ್ಧೆಗಳಲ್ಲಿ ವಿಜೇತರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 100, 200 ಮೀ. ಓಟದಲ್ಲಿ ಬಿ.ಕೆ.ಸ್ಮಿತಾ(ಪ್ರಥಮ), ಬಿ.ಎಂ.ತನುಶ್ರೀ (ದ್ವಿತೀಯ), 400 ಮೀ. ಓಟದಲ್ಲಿ ಆರ್.ಹರ್ಷಿತ (ತೃತೀಯ), 80 ಮೀಟರ್ ಹರ್ಡಲ್ಸ್‌ನಲ್ಲಿ ಆರ್.ಹರ್ಷಿತಾ(ಪ್ರಥಮ) ಹಾಗೂ ಎಂ.ಎನ್. ತೇಜಸ್ವಿನಿ (ದ್ವಿತೀಯ) ಸ್ಥಾನ ಪಡೆದಿದ್ದಾರೆ.

ಉದ್ದ ಜಿಗಿತದಲ್ಲಿ ಎಂ.ಎನ್.ತೇಜಸ್ವಿನಿ (ಪ್ರಥಮ), ಆರ್.ಹರ್ಷಿತಾ (ತೃತೀಯ), ರಿಲೇ ಓಟದಲ್ಲಿ ಬಿ.ಕೆ.ಸ್ಮಿತಾ, ಎಂ.ಎನ್.ತೇಜಸ್ವಿನಿ , ಆರ್.ಹರ್ಷಿತಾ, ಬಿ.ಎನ್.ತನುಶ್ರೀ ಅವರನ್ನು ಒಳಗೊಂಡ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ. ಒಟ್ಟಾರೆ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಜ್ಞಾನಪ್ರಭಾ ಶಾಲೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಬಾಲಕಿಯರ ವೈಯಕ್ತಿಕ ಚಾಂಪಿಯನ್ ಶಿಪ್ ಅನ್ನು ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸ್ಮಿತಾ ತಮ್ಮದಾಗಿಸಿಕೊಂಡಿದ್ದಾರೆ.

14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪವನ್ 400 ಮೀಟರ್ ಓಟದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇತ್ತೀಚಿಗೆ ಹಾಸನದ ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದ ವಲಯ ಮಟ್ಟದ ಖೋ-ಖೋ ಬಾಲಕಿಯರ ವಿಭಾಗದ ಕ್ರೀಡೆಯಲ್ಲಿ ತೃತೀಯ ಸ್ಥಾನ ಹಾಗೂ ಚಿಕ್ಕಮಗಳೂರಿನಲ್ಲಿ ನಡೆದ ವಲಯ ಮಟ್ಟದ ಬಾಲಕಿಯರ ಕಬಡ್ಡಿ ಕ್ರೀಡೆಯಲ್ಲಿ ದ್ವಿತೀಯ ಸ್ಥಾನವನ್ನು ಶಾಲೆಯು ಪಡೆದುಕೊಂಡಿದೆ.

ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ನಿಖಿಲ್ ಅಂತೋನಿ ಅವರನ್ನು ಶಾಲೆ ವತಿಯಿಂದ ಮಂಗಳವಾರ ಅಭಿನಂಧಿಸಲಾ ಯಿತು. ಅಧ್ಯಕ್ಷ ಎ.ಜಿ.ಪ್ರಭಾಕರ್, ಕಾರ್ಯದರ್ಶಿ ಎಂ.ಕೆ.ಹರೀಶ್, ಪ್ರಾಂಶುಪಾಲ ಸಂಜಯ್ ಕ್ರಿಸ್ಟೋಫರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net