

ಗುತ್ತಲ: ಪಟ್ಟಣದ ಶ್ರೀ ವೀರಭದ್ರೇಶ್ವರ ಅಗ್ನಿಕುಂಡ ಜಾತ್ರಾ ಮಹೋತ್ಸವ ಸೆ. 12ರಂದು ನಡೆಯಲಿದೆ.
ಸಂಪ್ರದಾಯದಂತೆ ಪ್ರತಿ ಶ್ರಾವಣ ಮಾಸದ ಕೊನೆಯ ಮಂಗಳವಾರ ಜಾತ್ರೆಯ ಜರುಗಲಿದೆ. ಬೆಳಗ್ಗೆ 8 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪುರವಂತರ ಗುಗ್ಗಳವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ 4 ಗಂಟೆಗೆ ಪುನಃ ದೇವಸ್ಥಾನಕ್ಕೆ ಆಗಮಿಸುವುದು.
ನಂತರ ಬೃಹತ್ ಅಗ್ನಿಕುಂಡಕ್ಕೆ ಸಾಂಪ್ರದಾಯಿಕ ಪೂಜೆ ನೆರವೇರಿದ ನಂತರ ಪುರವಂತರು ಸೇರಿದಂತೆ ನೂರಾರು ಭಕ್ತರು ಅಗ್ನಿಕುಂಡ ಹಾಯುವರು ಎಂದು ಅಗ್ನಿಕುಂಡ ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.