

ಗುತ್ತಲ: ಗುತ್ತಲ ದಸರಾ ಉತ್ಸವಕ್ಕೆ ನೆಗಳೂರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುತ್ತಲ ಕಲ್ಮಠದ,- ಅಗಡಿ ಪ್ರಭುಸ್ವಾಮಿ ಮಠದ ಶ್ರೀಗುರುಸಿದ್ಧ ಸ್ವಾಮೀಜಿ ಅ. 3ರಂದು ಸಂಜೆ 5 ಗಂಟೆಗೆ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಚಾಲನೆ ನೀಡಲಿದ್ದಾರೆ.
ನಾಡದೇವಿ ಚಾಮುಂಡೇಶ್ವರಿಗೆ ದೇವಿಗೆ ಗುತ್ತಲ ಠಾಣೆಯ ಪಿಎಸ್ಐ ಬಸನಗೌಡ ಬಿರಾದಾರ ಪ್ರಥಮ ಪೂಜೆ ಸಲ್ಲಿಸುವರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಗಳ ಮೂಲಕ ಅಲಂಕೃತ ಮಂಟಪದಲ್ಲಿ ದೇವಿಯ ಭವ್ಯ ಮೆರವಣಿಗೆ ಜರುಗುವುದು. ನಂತರ ರಾತ್ರಿ ಎಲೆಪೇಟೆಯಲ್ಲಿರುವ ಚೌತ ಕಟ್ಟಿಯಲ್ಲಿ ದೇವಿ ಪ್ರತಿಷ್ಠಾಪಿಸಲಾಗುವುದು.
ಗುತ್ತಲ ದಸರಾ- 2024ರ ಅಂಗವಾಗಿ ಅ. 8ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಜರಗುವುದು. ಸಂಜೆ 7ಕ್ಕೆ ಹಾವೇರಿ-ಬ್ಯಾಡಗಿಯ ಪೃಥ್ವಿ ಕಲಾ ತಂಡದಿಂದ ಮನರಂಜನಾ ಕಾರ್ಯಕ್ರಮ ಜರಗುವುದು.
9ರಂದು ಸಂಜೆ 7ಕ್ಕೆ ಗುತ್ತಲದ ಸ್ವಾಮಿ ಮೆಲೋಡಿಯಸ್ ತಂಡದಿಂದ ಸಾಂಸತಿಕ ಕಾರ್ಯಕ್ರಮ ಜರುಗುವುದು. 10ರಂದು ಸಂಜೆ 7ಕ್ಕೆ ಯುವ ದಸರಾ ಹಾಗೂ ದಸರಾ ಕಾರ್ಯಕ್ರಮದ ಸಮಾರೋಪ ಸಮಾರಂಭ ನೆರವೇರುವುದು ಎಂದು ದಸರಾ ಉತ್ಸವ ಸಮಿತಿ ಕಾರ್ಯದಶಿರ್ ಪ್ರದಿಪ ಸಾಲಗೇರಿ ಹಾಗೂ ಅಧ್ಯಕ್ಷ ಚನ್ನಪ್ಪ ಕಲಾಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.