ಗುತ್ತಲದಲ್ಲಿ ಶ್ರೀ ವೀರಭದ್ರೇಶ್ವರ ಅಗ್ನಿಕುಂಡ ಜಾತ್ರಾ ಮಹೋತ್ಸವ

12-GUTTAL
Published on

ಗುತ್ತಲ: ಪಟ್ಟಣದ ಶ್ರೀ ವೀರಭದ್ರೇಶ್ವರ ಅಗ್ನಿಕುಂಡ ಜಾತ್ರಾ ಮಹೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು. ಜಾತ್ರೆ ಅಂಗವಾಗಿ ಬೆಳಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಗುಗ್ಗಳದ ಮೆರವಣಿಗೆಯಲ್ಲಿ ಪುರವಂತರು ಒಡಪು ಹೇಳುತ್ತ ಸಾಗಿದರು. ಪಟ್ಟಣದ ಶ್ರೀ ಹೇಮಗಿರಿ ಚನ್ನಬಸವೇಶ್ವರರ ಮಠಕ್ಕೆ ಗುಗ್ಗಳದ ಮೆರವಣಿಗೆ ಆಗಮಿಸಿದಾಗ ಪುರವಂತರಾದ ಬಸವರಾಜ ಗಂಗಣ್ಣನವರ ದಾರವನ್ನು ನಾಲಗೆಯಲ್ಲಿ ಎಳೆಯುತ್ತ ಮೆರವಣಿಗೆ ಸಮ್ಮಾಳದ ಶಬ್ದಕ್ಕೆ ತಕ್ಕಂತೆ ನಾಟ್ಯ ಮಾಡುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು. ಮೆರವಣಿಗೆ ಸಂಜೆ 5.30ಕ್ಕೆ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿತು. ನಂತರ ಪುರವಂತರು ಹಾಗೂ ಭಕ್ತರು ಅಗ್ನಿಕುಂಡ ಪ್ರವೇಶ ಮಾಡಿದರು. ವೀರಭದ್ರೇಶ್ವರ ಮಹಾರಾಜ ಕೀ ಜೈ, ಹರ ಹರ ಮಹದೇವ ಜೈಕಾರ ಮೊಳಗಿದವು. ಜಾತ್ರಾ ಮಹೋತ್ಸವದ ಅಂಗವಾಗಿ ಅನ್ನಸಂತರ್ಪಣೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net