

ಗುತ್ತಲ: ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದ 5 ಗ್ಯಾರಂಟಿಯನ್ನು ಈಡೇರಿಸುತ್ತದೆ. ವಿರೋಧ ಪಕ್ಷದವರು ಹತಾಶೆಯಿಂದ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಹೊಸರಿತ್ತಿಯ ಹುತಾತ್ಮ ಮೈಲಾರ ಮಹದೇವಪ್ಪ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹೊಸರಿತ್ತಿಯ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಶಾಸಕ ರುದ್ರಪ್ಪ ಲಮಾಣಿ ಅವರನ್ನು ಸನ್ಮಾನಿಸಿದರು. ಕೊಟ್ರೇಶಪ್ಪ ಬಸೇಗಣ್ಣಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಮಾದೇಗೌಡ ಗಾಜೀಗೌಡ್ರ, ರವೀಂದ್ರ ಜಂಗಳಿ, ನರೇಶ ಮಂತಟ್ಟಿ, ಮಲ್ಲೇಶ ದೀಪಾಳಿ, ರಮೇಶ ಶಿವಣ್ಣನವರ, ದುದ್ದುಸಾಬ ನದಾಫ್, ಪ್ರಕಾಶ ಹರಿಜನ, ಗೋಣೆಪ್ಪ ಮರಿತಂಗೆಮ್ಮನವರ, ಮಂಜುನಾಥ ಈಳಗೇರ, ಬಸವರಾಜ ಅಂಬಿಗೇರ, ಗುಡ್ಡಪ್ಪ ದೀಪಾಳಿ, ಈರಪ್ಪ ಲಮಾಣಿ, ಈರಪ್ಪ ಕ್ಲಲೇದೇವರ, ಹೊಳಲಪ್ಪ ಪೂಜಾರ, ಮಂಜುನಾಥ ಮಾಗಡಿ, ಸೇವಾದಳದ ಕಾರ್ಯಕರ್ತರು ಇದ್ದರು. ಗ್ರಾಪಂ ಸದಸ್ಯ ಶಂಕ್ರಣ್ಣ ಅಂಬಿಗೇರ, ಗುಡದಯ್ಯ ಭರಡಿ, ಮಲ್ಲಿಕಸಾಬ ಬಾಣಿ ನಿರ್ವಹಿಸಿದರು.