

ಗುತ್ತಲ: ಸಮೀಪದ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರು ಶ್ರಾವಣಮಾಸ ಪರ್ಯಂತ ಕೈಗೊಂಡಿದ್ದ ಬಹಿರಂಗ ಇಷ್ಟಲಿಂಗ ಪೂಜಾನುಷ್ಠಾನ ಸೆ. 15ರಂದು ಬೆಳಗ್ಗೆ 10.30ಕ್ಕೆ ಮಂಗಲಗೊಳ್ಳಲಿದೆ. ಬೆಳಗ್ಗೆ 6 ರಿಂದ ಶ್ರೀಮಠದ ಗದ್ದುಗೆಗಳಿಗೆ ರುದ್ರಾಭಿಷೇಕ, ಪೂಜಾ ಕೈಂಕರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಲಿದ್ದು, ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸುವರು. ಬಳಿಕ ಶ್ರೀಗಳು ಭಕ್ತರಿಗೆ ಪಾದೋದಕ ಪ್ರಸಾದ ಹಾಗೂ ಆಶೀರ್ವಚನ ನೀಡುವ ಮೂಲಕ ಶ್ರೀಗಳ 6ನೇ ವರ್ಷದ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ ಸಂಪನ್ನಗೊಳ್ಳವುದು. ಸಂಜೆ 5ಕ್ಕೆ ಗುರುಶಾಂತ ಶಿವಯೋಗಿಗಳವರ ಹರಕೆ ಪಲ್ಲಕ್ಕಿ ಉತ್ಸವ, ಧರ್ಮ ಸಮಾರಂಭ ಜರುಗಲಿದೆ ಎಂದು ಶ್ರೀಮಠದ ಸೇವಾ ಸಮಿತಿ ಅಧ್ಯಕ್ಷ ಸಿದ್ದಪ್ಪ ಬಾಲಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.