

ಗುತ್ತಲ: ರಾಜ್ಯ ಸರ್ಕಾರದ 4ನೇ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಬುಧವಾರ ಚಾಲನೆ ನೀಡಿದರು.
ಪಟ್ಟಣ ಪಂಚಾಯಿತಿ ಆಡಳಿತದಿಂದ ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಎಂ.ಡಿ. ಕಿಚಡೇರ, ಜಿಲ್ಲಾ ಹಿರಿಯ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಬಿ. ಕುರವತ್ತಿಗೌಡ್ರ, ನಾಗಾರಾಜ ಎರಿಮನಿ, ಶಹಜಾನಸಾಬ್ ಅಗಡಿ, ರುದ್ರಪ್ಪ ಹಾದಿಮನಿ, ಪಪಂ ಸದಸ್ಯರಾದ ಮಾಳವ್ವ ಗೊರವರ, ಶಕುಂತಲಾ ಗುತ್ತಲ, ದೀಪಾ ಭರಡಿ, ಮಹ್ಮದಹನೀಫ ರಿತ್ತಿ, ಪ್ರದೀಪ ಸಾಲಗೇರಿ, ಭರಮಪ್ಪ ಹಾದಮನಿ, ಎಸ್.ಜಿ ಹೊನ್ನಪ್ಪನವರ, ಖಲೀಲಹ್ಮದ ಖಾಜಿ, ಅಜಯ ಬಂಡಿವಡ್ಡರ, ಬಸಣ್ಣ ನೆಗಳೂರ, ಮಾಜಿ ಸದಸ್ಯ ಗುಡ್ಡಪ್ಪ ಗೊರವರ, ಲಿಂಗೇಶ ಬೆನ್ನೂರ, ಕೋಟೇಶ ಬನ್ನಿಮಟ್ಟಿ, ಚನ್ನಪ್ಪ ಕಲಾಲ, ಪಿಕೆಪಿಎಸ್ ಸಂಘದ ಉಪಾಧ್ಯಕ್ಷ ಕೊಟೇಪ್ಪ ಗೊರವರ, ನಿರ್ದೇಶಕ ಚನ್ನಪ್ಪ ಬನ್ನಿಮಟ್ಟಿ, ಶಂಕ್ರಪ್ಪ ಗೌಳಿ, ಮಾಲಾ ಬಳಿಗಾರ, ಪ್ರಕಾಶ ಉಜ್ಜನಿ, ಸುವರ್ಣಾ ಕೋರಿ, ಮಾಲತಿ ಬಡೇಸೂರ, ಗಣೇಶ ಚವ್ಹಾಣ, ಜಯಮ್ಮ ಮ್ಯಾಗೇರಿ, ಮಂಜುನಾಥ ಕೆಂಚಮಲ್ಲ, ಫಲಾನುಭವಿಗಳು ಇದ್ದರು.
ಪಪಂ ಮುಖ್ಯಾಧಿಕಾರಿ ಡಾ. ದೇವಾನಂದ ದೊಡ್ಡಮನಿ, ಪಿ.ಎನ್. ಹೇಮಗಿರಿಮಠ ಹಾಗೂ ಸೋಮಶೇಖರ ತಿಪ್ಪಿಗುಂಡಿ ಕಾರ್ಯಕ್ರಮ ನಿರ್ವಹಿಸಿದರು.