

| ಧನುಷ್, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಗುತ್ತಲ
ಅವಧಿಗೂ ಮುನ್ನ ಬೀಜ ಬಿತ್ತನೆ ಮಾಡಿರುವ ಕಡಲೆ ಬೆಳೆ ಸೇರಿದಂತೆ ಅಲಸಂದಿ ಹಾಗೂ ಜೋಳಕ್ಕೆ ಎಲೆ ತಿನ್ನುವ ಕಿಡೆ ಹುಳು ಹಾನಿಯನ್ನುಂಟು ಮಾಡುತ್ತದೆ. ಹುಳುಗಳ ಹತೋಟಿಗೆ ಕೊರಾಜಿನ್ ಅಥವಾ ಎಮಾಮೆಟೀನ್ ಬೆಂಜೋಯಿಟ್ ಎಂಬ ಕ್ರೀಮಿ ನಾಶಕವನ್ನು ಸಿಂಪರಣೆ ಮಾಡಬೇಕು.
ಕೆಲ ರೈತರು ಕಡಲೆ ಬೀಜಗಳನ್ನು ಜೋಳದೊಂದಿಗೆ ಅಂತರ ಬೆಳೆಯಾಗಿ ಬಿತ್ತನೆ ಮಾಡಿದ್ದಾರೆ. ಲದ್ದಿ ಹುಳು ಕಡಲೆ ಹಾಗೂ ಜೋಳವನ್ನು ಹಾನಿ ಮಾಡುತ್ತಿದೆ. ಕೃಷಿ ವಿಜ್ಞಾನಿಗಳು ಶಿಫಾರಸು ಮಾಡಿದ ಕಾಲಕ್ಕೆ ಬಿತ್ತನೆ ಮಾಡಿದ್ದರೆ ಲದ್ದಿ ಹುಳುಗಳ ಕಾಟವನ್ನು ತಪ್ಪಿಸಬಹುದಿತ್ತು ಎಂಬ ಮಾತುಗಳ ಕೇಳಿ ಬರುತ್ತಿವೆ. ಆದರೆ, ಅಕಾಲಿಕ ಮಳೆ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಅನೇಕ ರೈತರು ವಾಡಿಕೆಯ ಬಿತ್ತನೆಯ ಅವಧಿಗೂ ಮುನ್ನವೇ ಕಡಲೆ ಬೀಜವನ್ನು ಬಿತ್ತನೆ ಮಾಡಿದ್ದಾರೆ. ಹೀಗಾಗಿ, ಬೆಳೆ ಲದ್ದಿ ಹುಳುವಿನ ಬಾಧೆಗೆ ತುತ್ತಾಗಿದೆ. ಇನ್ನು ಮುಂಗಾರಿನಲ್ಲಿ ಮೆಕ್ಕೆಜೋಳಕ್ಕೆ ದಾಳಿ ಮಾಡಿದ್ದ ಲದ್ದಿ ಹುಳು ಅದೇ ಜಮೀನು ಅಥವಾ ಅಕ್ಕಪಕ್ಕದ ಜಮೀನುಗಳಲ್ಲಿ ಕಡಲೆ, ಜೋಳ, ಅಲಸಂದಿ ಬೀಜ ಬಿತ್ತಿರುವ ಕಾರಣ ಹುಳುಗಳು ಪುನಃ ಬೆಳೆಗಳಿಗೆ ಹಾನಿ ಮಾಡಲು ಅನುಕೂಲ ಆಗಿದೆ ಎಂಬುದು ಕೃಷಿ ಅಧಿಕಾರಿಗಳ ಅಭಿಪ್ರಾಯವಾಗಿದೆ. ಈ ಲದ್ದಿ ಹುಳುಗಳ ಹತೋಟಿಗೆ ಕೊರಾಜಿನ್ ಅಥವಾ ಎಮಾಮೆಟೀನ್ ಬೆಂಜೋಯಿಟ್ ಕ್ರೀಮಿ ನಾಶಕವನ್ನು ಸಿಂಪಡಣೆ ಮಾಡುವಂತೆ ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಅಲ್ಲದೆ, ಹವಾಮಾನ ವೈಪರಿತ್ಯದಿಂದ ಕಡಲೆಗೆ ಸೊರಗು ರೋಗ ಸಹ ಕಾಣಿಸಿಕೊಂಡಿದೆ. ಗುತ್ತಲ ಹೋಬಳಿಯಲ್ಲಿ 3,200 ಎಕರೆ ಪ್ರದೇಶದಲ್ಲಿ ಕಡಲೆ ಬೀಜ ಬಿತ್ತನೆ ಮಾಡಲಾಗಿದೆ. ಬಿತ್ತನೆ ಗುರಿಯ ಶೇ. 90 ರಷ್ಟು ಬೀಜ ಬಿತ್ತನೆ ಮಾಡಲಾಗಿದೆ. ಇನ್ನು ಶೇ. 10ರಷ್ಟು ಬಿತ್ತನೆ ಕಾರ್ಯ ಆಗಬೇಕಿದೆ. ಅಲಸಂದಿ 500 ಎಕರೆ, ಕುಸುಬಿ 100 ಎಕರೆ ಹಾಗೂ ಜೋಳ ಬೀಜ 220 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಕಡಲೆ ಬೆಳೆ ಹೂವು ಬಿಟ್ಟ ನಂತರ ಕಾಯಿ ಕಟ್ಟುವ ಸಮಯದಲ್ಲಿ ಹೆಚ್ಚಾಗಿ ಹಾನಿ ಮಾಡು ಲದ್ದಿ ಹುಳುಗಳು ಬೆಳೆಯನ್ನು ಸಂಪೂರ್ಣ ಹಾಳು ಮಾಡುತ್ತವೆ. ಇದನ್ನು ತಪ್ಪಿಸಲು ರೈತರು ಕ್ರಿಮಿನಾಶಕ ಸಿಂಪಡಣೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಮುಂಗಡವಾಗಿ ಬಿತ್ತನೆ ಮಾಡಿರುವ ಕಡಲೆ ಬೆಳೆಗೆ ಈಗ ಸೊರಗು ರೋಗ ಕಾಣಿಸಿಕೊಳ್ಳುತ್ತಿದೆ. ಇದರೊಂದಿಗೆ ಲದ್ದಿ ಹುಳು ಸಹ ಬೆಳೆಯನ್ನು ಹಾಳು ಮಾಡುತ್ತಿರುವುದು ರೈತರ ನಿದ್ದೆಗೆಡಸಿದೆ. ಮುಂಗಾರು ಹಂಗಾಮಿನಲ್ಲಿ ಮೆಕ್ಕಜೋಳವನ್ನು ಬಾಧಿಸಿದ್ದ ಲದ್ದಿ ಹುಳು ಈಗ ಪ್ರಮುಖವಾಗಿ ಕಡಲೆ, ಅಲಸಂದಿ, ಜೋಳ ಬೆಳೆಗಳನ್ನು ಕಾಡುತ್ತಿದೆ.
ಗುತ್ತಲ: ಸೊರಗು ರೋಗ ಹಾಗೂ ಮುಂಗಾರಿನಲ್ಲಿ ಮೆಕ್ಕೆಜೋಳಕ್ಕೆ ಕಾಡಿದ ಲದ್ದಿ ಹುಳು (ಎಲೆ ತಿನ್ನುವ ಕೀಡೆ) ಈಗ ಬೇಸಿಗೆಯ ಪ್ರಮುಖ ಕಡಲೆ ಬೆಳೆಯನ್ನು ಕಾಡುತ್ತಿದೆ. ಇದು ರೈತರ ಚಿಂತೆಗೆ ಕಾರಣವಾಗಿದೆ.
| ಅಜ್ಜಪ್ಪ ಗಿರಿಯಪ್ಪನವರ ರೈತ ಗುತ್ತಲ
ಕಡಲೆ ಬೆಳೆಗೆ ಹುಳುಗಳ ಲದ್ದಿ ಹುಳುಗಳ ಕಾಟ ಹೆಚ್ಚಾಗಿದೆ. ಕಾಯಿ ಬಿಡುವ ಹಂತದಲ್ಲಿದ್ದಾಗ ಕಾಯಿಯನ್ನು ಕೊರೆದು ಹಾನಿ ಮಾಡುತ್ತಿದೆ. ಇದಕ್ಕೆ ಕೀಟನಾಶಕ ಸಿಂಪಡಣೆಯನ್ನು ಕೂಡಲೇ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.