ಗುಟ್ಕಾ ತಿನ್ನುತ್ತಿದ್ದ ವ್ಯಕ್ತಿ ಮನನೊಂದು ಆತ್ಮಹತ್ಯೆ

Boy Suside+1
Published on

ಬ್ಯಾಡಗಿ: ವಿಪರೀತ ಗುಟ್ಕಾ ತಿನ್ನುತ್ತಿದ್ದ ವ್ಯಕ್ತಿಯೊಬ್ಬ ತಿಂದ ಊಟ ಪಚನವಾಗದೆ ಹಾಗೂ ರಾತ್ರಿ ನಿದ್ದೆ ಬಾರದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ನಾರಾಯಣ ವಸಂತರಾವ್​ ಕುಂಠೆ (52) ಮೃತ ವ್ಯಕ್ತಿ.

ಈತ ವಿಪರೀತ ಗುಟ್ಕಾ ತಿನ್ನುತ್ತಿದ್ದ. ಇದರಿಂದ ಊಟ ಮಾಡಿದರೂ ಪಚನವಾಗುತ್ತಿರಲಿಲ್ಲ. ಅಲ್ಲದೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net