ಗುತ್ಯಮ್ಮದೇವಿ ದೇವಿ ರಥೋತ್ಸವ ಸಂಭ್ರಮ

nrp rATHA
ಎನ್.ಆರ್.ಪುರ ಹಳೇಪೇಟೆ ಗುತ್ಯಮ್ಮ ದೇವಸ್ಥಾನದಲ್ಲಿ ಮಹಾ ರಥೋತ್ಸವ ನಡೆಯಿತು.
Published on

ಎನ್.ಆರ್.ಪುರ: ಹಳೇಪೇಟೆ ಗುತ್ಯಮ್ಮ ದೇವಸ್ಥಾನದಲ್ಲಿ ಮಹಾ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ ದುರ್ಗಾಹೋಮ, ಮಧ್ಯಾಹ್ನ ಅಮ್ಮನವರ ರಥೋತ್ಸವ ನಡೆಯಿತು. ರಾತ್ರಿ ಶ್ರೀ ದುರ್ಗಾಂಬಾದೇವಿ ಮತ್ತು ಶ್ರೀ ಅಂತರಘಟ್ಟಮ್ಮ ದೇವಿಯೊಂದಿಗೆ ಗುತ್ಯಮ್ಮ ದೇವಸ್ಥಾನದಿಂದ ಹೊರಟು ಪಟ್ಟಣದ ಅಂಬೇಡ್ಕರ್ ವೃತ್ತದವರೆಗೆ ಮಂಗಳವಾದ್ಯದೊಂದಿಗೆ ರಾಜಬೀದಿಯಲ್ಲಿ ಮಹಾ ರಥೋತ್ಸವ ನಡೆಯಿತು. ಗುತ್ಯಮ್ಮ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪಿ.ಆರ್.ಸದಾಶಿವ, ಪ್ರಧಾನ ಕಾರ್ಯದರ್ಶಿ ಎಚ್.ಎನ್.ರವಿಶಂಕರ್, ಖಜಾಂಚಿ ನಾಗರಾಜ್, ಹಿರಿಯರಾದ ತಿಮ್ಮೇಗೌಡ, ಮೂರ್ತಿ, ಟ್ರಸ್ಟ್ ಸದಸ್ಯರು ಹಾಗೂ ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಏ.27ರಂದು ಬೆಳಗ್ಗೆ 10.30ರಿಂದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ವೃತ ಹಾಗೂ ಅಮ್ಮನವರಿಗೆ ವಿಶೇಷ ಪೂಜೆ ನಡೆಯಲಿದೆ. ರಾತ್ರಿ ಅಮ್ಮನವರ ಉತ್ಸವದೊಂದಿಗೆ ಹೀಲ್‌ಬೈಲಿಗೆ ತೆರಳಿ ವಿಶೇಷ ಪೂಜೆ ಹಾಗೂ ಬೆಳಗಿನ ಜಾವ 4 ಗಂಟೆ ಕೆಂಡಾರ್ಚನೆ ನಡೆಯಲಿದೆ. 28ರಂದು ವಿಶೇಷ ಪೂಜೆ ಹಾಗೂ ರಾತ್ರಿ ಪಂಜುರ್ಲಿ ಕೋಲ ನಡೆಯಲಿದೆ. 29ರಂದು ವಿಶೇಷ ಪೂಜೆ ಮತ್ತು ಅಷ್ಟಕುಲ ನಾಗೇಂದ್ರ ಸ್ವಾಮಿಗೆ ಪಂಚಾಮೃತ ಸಹಿತ ಪವಮಾನ ಪೂಜೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net