ಗುರುವಿನ ಅರಿವು ವಿಶೇಷ ಉಪನ್ಯಾಸ ಮಾಲಿಕೆ

guru
Published on

ಕಾರ್ಕಳ: ಬ್ರಿಟಿಷ್ ಅಧಿಪತ್ಯದ ಕಾಲದಲ್ಲಿ ನಾರಾಯಣಗುರುಗಳು ಸಾರಿದ ತತ್ವಗಳು ಇಂದಿನ ವೈಜ್ಞಾನಿಕ ಯುಗವೂ ಕೂಡ ಅನುಸರಿಸುವಂಥದ್ದು. ಅಂದು ಸವಾಲಾಗಿದ್ದ ಜಾತಿ ವ್ಯವಸ್ಥೆ ವಿರುದ್ಧ ನಾರಾಯಣಗುರುಗಳು ಧಾರ್ಮಿಕ ಹೋರಾಟ ಮಾಡಿ ಜಾತಿಯ ಅಂತರವನ್ನು ದೂರ ಮಾಡಿದ್ದರು ಎಂದು ಆಳ್ವಾಸ್ ಕಾಲೇಜು ಉಪನ್ಯಾಸಕ ಡಾ.ಕೃಷ್ಣರಾಜ ಕರಬ ಹೇಳಿದರು.

ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳಗಂಗೋತ್ರಿ ಹಾಗೂ ಶ್ರೀ ಭುವನೇಂದ್ರ ಕಾಲೇಜು ಕನ್ನಡ ಸಂಘ ಸಹಯೋಗದಲ್ಲಿ ಆಯೋಜಿಸಲಾದ ಗುರುವಿನ ಅರಿವು ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಕಾರ‌್ಯಕ್ರಮ ಸಂಯೋಜಕ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಶ್ರೀ ಮುದ್ದು ಮೂಡುಬೆಳ್ಳೆ ಪ್ರಸ್ತಾವಿಸಿದರು. ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಹಾಗೂ ಕಾರ‌್ಯಕ್ರಮದ ಅತಿಥಿ ಮೋಹನ್ ಪಡಿವಾಳ್ ಮುಖ್ಯ ಅತಿಥಿಯಾಗಿದ್ದರು.

ಒಂದೇ ಜಾತಿ ಒಂದೇ ಧರ್ಮ ಒಂದೇ ದೇವರು ಎನ್ನುವ ಅವರ ಸಂದೇಶದಂತೆ ಧಾರ್ಮಿಕ ಕ್ಷೇತ್ರಗಳು ಉದಾತ್ತ ಚಿಂತನೆಗಳನ್ನು ಸಮಾಜಕ್ಕೆ ನೀಡಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಎ.ಕೋಟ್ಯಾನ್ ಹೇಳಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ದತ್ತಾತ್ರೇಯ ಮಾರ್ಪಳ್ಳಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಸರಸ್ವತಿ ಸ್ವಾಗತಿಸಿದರು. ವಿದ್ಯಾರ್ಥಿ ನವೀನ್ ಆರ್.ಭಟ್ ನಿರೂಪಿಸಿದರು.

ಇಂದು ನಾರಾಯಣ ಗುರುಗಳನ್ನು ಆರಾಧನೆಯ ದೃಷ್ಟಿಯಲ್ಲಿ ನೋಡುತ್ತಿದೇವೆ ವಿನಃ ಅವರ ತತ್ವಗಳನ್ನು ಅಳವಡಿಸಿಕೊಂಡಿಲ್ಲ ಮತ್ತು ಧರ್ಮಕ್ಕೆ ನಮ್ಮದೇ ಆದ ಬಣ್ಣವನ್ನು ನೀಡಿ ತಿರುಚುತ್ತಾ ಬಂದಿದ್ದೇವೆ. ನಾರಾಯಣ ಗುರುಗಳು ಯಾವುದೇ ಜನಾಂಗಕ್ಕೆ ಸಂಬಂಧಪಟ್ಟವರಲ್ಲ ಅವರು ವಿಶ್ವಮಾನವತಾವಾದಿ.

ಡಾ.ಕೃಷ್ಣರಾಜ ಕರಬ, ಆಳ್ವಾಸ್ ಕಾಲೇಜಿನ ಉಪನ್ಯಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net