ದೇವರ ಆರಾಧನೆಯಲ್ಲಿ ಹೊಸ ಪ್ರಮೇಯ ಸಲ್ಲ : ಉದ್ಯಮಿ ಶಶಿಧರ ಶೆಟ್ಟಿ ಹೇಳಿಕೆ

New Project (26)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ದೇವರ ಆರಾಧನೆಯಲ್ಲಿ ಹೊಸ ಪ್ರಮೇಯಕ್ಕೆ ಇಳಿಯುವುದು ಬೇಡ. ಈಗಾಗಲೇ ಇರುವ ದೇವಾಲಯಗಳಲ್ಲಿ ಬ್ರಹ್ಮಕಲಶೋತ್ಸವ ಆಗುವುದೇ ಕಷ್ಟ. ಇಲ್ಲಿ ದೇವರಿಗೆ ನಡೆಯುತ್ತಿರುವುದು ಸಂಪ್ರೋಕ್ಷಣೆ, ಬ್ರಹ್ಮಕಲಶಾಭಿಷೇಕವಲ್ಲ ಎಂದು ಬರೋಡದ ಉದ್ಯಮಿ ಶಶಿಧರ ಶೆಟ್ಟಿ ಹೇಳಿದರು.

ಗುರುವಾಯನಕೆರೆ ಅಯ್ಯಪ್ಪ ಸ್ವಾಮಿ ಮಂದಿರದ ಬ್ರಹ್ಮಕಲಶೋತ್ಸವ ಹಾಗೂ 38ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಚಿತ್ರನಟ ಅರವಿಂದ ಬೋಳಾರ್ ಮಾತನಾಡಿ ಶಬರಿಮಲೆ ಯಾತ್ರೆಯಲ್ಲಿರುವ ಒಗ್ಗಟ್ಟು ನಂತರ ಕೂಡ ಇರಬೇಕು ಎಂದರು.

ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ದೈವ ದೇವರ ಶ್ರದ್ಧೆಯ ಆರಾಧನೆಯಿಂದ ಜೀವನದಲ್ಲಿ ಉನ್ನತಿ ಸಾಧ್ಯ ಎಂದರು. ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ಸಾಮರಸ್ಯ ಗತಿವಿಧಿ ಮಂಗಳೂರು ವಿಭಾಗದ ಸಹ ಸಂಯೋಜಕ್ ಶಿವಪ್ರಸಾದ್ ಮಲೆಬೆಟ್ಟು ಮೊದಲಾದವರು ಮಾತನಾಡಿದರು.

ಗುರುವಾಯನಕೆರೆ ವೈದ್ಯ ಡಾ.ವೇಣುಗೋಪಾಲ ಶರ್ಮ ಅವರನ್ನು ಸನ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಪತ್ ಬಿ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ನಾಯರ್, ಗುರುವಾಯನಕೆರೆ ಉದ್ಯಮಿ ಸೀತರಾಮ ಶೆಟ್ಟಿ, ಕುವೆಟ್ಟು ಗ್ರಾಪಂ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ, ಜನಾದರ್ನ ಮೂಲ್ಯ ಗುರುವಾಯನಕೆರೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಕರ್ನಂತೋಡಿ, ೋಶಾಧಿಕಾರಿ ಪ್ರತಾಪ್ ನಾಯರ್, ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷ ಮೋಹನ್ ಕುಲಾಲ್ ಉಪಸ್ಥಿತರಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಪತ್ ಬಿ ಸುವರ್ಣ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಚಿದಾನಂದ ಇಡ್ಯ ವಂದಿಸಿದರು. ಸಮಿತಿ ಜತೆಕಾರ್ಯದರ್ಶಿ ನಿತೇಶ್ ಆದೇಲು ನಿರೂಪಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮೋಹನ್ ಕುಲಾಲ್ ಕಬ್ಬನಿಹಿತ್ತಿಲು, ರವಿ ಪೂಜಾರಿ ಆದೇಲು, ಪುರಂದರ ಶೆಟ್ಟಿ ಅಕ್ಷಯ, ಜತೆಕಾರ್ಯದರ್ಶಿ ಭುವಿತ್ ಶೆಟ್ಟಿ, ಟ್ರಸ್ಟಿಗಳಾದ ಆನಂದ ಕೋಟ್ಯಾನ್, ವಸಂತ ಶೆಟ್ಟಿ ಮದ್ದಡ್ಕ, ವಸಂತ ಕರ್ಕೇರ ಶಿರ್ಕಾಲು, ಶ್ರೀಧರ ಹೆಗ್ಡೆ ಕೇದಗೆ, ಶೇಖರ ನಾಯ್ಕ ಗೇರುಕಟ್ಟೆ, ನಿತ್ಯಾನಂದ ಗೌಡ ಕರ್ನಂತೋಡಿ, ರವಿ ಪೂಜಾರಿ, ವಸಂತ ಶೆಟ್ಟಿ ಖಂಡಿಗ, ವಿಠಲ ಶೆಟ್ಟಿ ಪಾಡ್ಯಾರು,ನಾರಾಯಣ ಬಂಗೇರ ಕಡಂಬು, ಶುಭಕರ ಪೆರಾಜೆ, ಪ್ರತಾಪ್ ನಾಯರ್, ಹರಿದಾಸ್ ಹಾಗೂ ಸಮಿತಿ ಸದಸ್ಯರು ಸಹಕರಿಸಿದರು.

ನಮ್ಮ ಸಂಸ್ಕೃತಿ, ಆಚಾರವಿಚಾರಗಳನ್ನು ಗಟ್ಟಿಗೊಳಿಸುವ ದೊಡ್ಡ ಪ್ರಯತ್ನವನ್ನು ಯಕ್ಷ ಸಂಭ್ರಮದಲ್ಲಿ ನೋಡಿದ್ದೇನೆ. ಸಮಾಜ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಈ ವರ್ಷ ಸರ್ಕಾರಿ ಶಾಲೆಯಲ್ಲಿ ಕಲಿತು ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು. ಮೋಹನ್ ಕುಮಾರ್ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ವಿದ್ಯಾರ್ಥಿಯಾಗಿದ್ದಾಗ ಡಾಕ್ಟರ್ ಆಗಬೇಕೆಂಬ ಆಸೆಯಿತ್ತು. ನನ್ನದು ಸಣ್ಣಮನೆ, ಚಿಮಿಣಿ ದೀಪದಲ್ಲಿ ಓದಿದವ. ನಾನು ಏನಾದರೂ ಸಾಧನೆ ಮಾಡಿದರೆ ಅದು ನನ್ನೂರಲ್ಲಿ ಮಾಡಬೇಕೆಂಬ ಛಲವಿತ್ತು. ಎಲ್ಲರ ಸಹಕಾರದಿಂದ ಗುರುವಾಯನಕೆರೆಯಲ್ಲಿ ಎಕ್ಸೆಲ್ ಕಾಲೇಜು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಸುಮಂತ್ ಕುಮಾರ್ ಜೈನ್ ಅಧ್ಯಕ್ಷರು ಎಕ್ಸೆಲ್ ಕಾಲೇಜು, ಗುರುವಾಯನಕೆರೆ https://www.vijayavani.net/karnataka-journalist-union-program https://www.vijayavani.net/mangalore-adyapadi-temple-website-facebook-page-instragram-and-launching

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net