

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ ಕಲಿಕೆಯು ಕೇವಲ ಕಲಿಕೆ ಅಲ್ಲ. ಅದರೊಂದಿಗೆ ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕಾರ್ಯವಾಗುತ್ತದೆ. ಇಂತಹ ಸಂಸ್ಕಾರ ನೀಡಿದ ಗುರುವಿಗೆ ಗುರುನಮನ ಸಲ್ಲಿಸುವುದು ಮಕ್ಕಳ ಮತ್ತು ಅವರ ಪಾಲಕರ ಜವಾಬ್ದಾರಿ ಎಂದು ಪದ್ಮಶ್ರೀ ಡಾ. ಎಂ. ವೆಂಕಟೇಶಕುಮಾರ ಹೇಳಿದರು.
ತಬಲಾವಾದಕ ಪಂ. ಶಂಕ್ರಪ್ಪ ಭೀಮಾಬಾಯಿ ಹೂಗಾರ ಸಂಗೀತ ಸಂಘದಿ0ದ ನಗರದ ಬೇಂದ್ರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪಂ. ಸಾತಲಿಂಗಪ್ಪ ಹೂಗಾರ ದೇಸಾಯಿ ಕಲ್ಲೂರ ಅವರಿಗೆ ಗುರುವಂದನೆ- ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಂ. ಸಾತಲಿಂಗಪ್ಪ ಅವರು ಗುರುಕೃಪೆಯಿಂದ ತಬಲಾ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ ಎಂದರು.
ಸ್ತಿçÃರೋಗ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಮಾತನಾಡಿ, ಗುರುಗಳಿಂದ ಕಲಿತ ವಿದ್ಯೆಯನ್ನು ಪೂಜ್ಯ ಭಾವನೆಯಿಂದ ಸಮರ್ಪಣೆ ಮಾಡುವುದೆ ಗುರುವಂದನೆ ಕಾಲವಾಗಿದೆ. ಸಂಗೀತ ಕಲಿಕೆಯು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಧನಾತ್ಮಕ ಪರಿಣಾಮ ಬೀರುವ ಮೂಲಕ ಪರಿವರ್ತನೆ ತರುತ್ತದೆ ಎಂದರು.
ಹಿರಿಯ ವಯೋಲಿನ್ ವಾದಕ ಪಂ. ವಾದಿರಾಜ ನಿಂಬರಗಿ ಮಾತನಾಡಿದರು. ಪಂ. ಸಾತಲಿಂಗಪ್ಪ ಹೂಗಾರ ದೇಸಾಯಿ ಕಲ್ಲೂರ ದಂಪತಿಗೆ ಶಿಷ್ಯವೃಂದದಿ0ದ ಗುರುವಂದನೆ ಸಲ್ಲಿಸಿ ಸನ್ಮಾನಿಸಲಾಯಿತು.
ಹಿರಿಯ ವಕೀಲ ಡಾ. ಉದಯಕುಮಾರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.
ನಂತರ ಜರುಗಿದ ಸಂಗೀತೋತ್ಸವದಲ್ಲಿ ಕಲಬುರಗಿಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ, ಗಾಯಕ ಶಂಕರ ಹೂಗಾರ ದೇಸಾಯಿ ಕಲ್ಲೂರ ಗಾಯನದಲ್ಲಿ ರಾಗ ಬೃಂದಾವನಿ ಸಾರಂಗ, ಉಮೇಶ ಮುನವಳ್ಳಿ ಅಭಂಗ ಮತ್ತು ಭಕ್ತಿ ಸಂಗೀತ ಹಾಗೂ ನೇಹಾ ಮತ್ತು ತನ್ವಿ ಸಿತಾರ ದ್ವಂದ್ವ ವಾದನ ಪ್ರಸ್ತುತಪಡಿಸಿದರು. ಸಂವಾದಿನಿಯಲ್ಲಿ ವಿನೋದ ಪಾಟೀಲ, ಭಾಗ್ಯಶ್ರೀ ಹೂಗಾರ ಹಾಗೂ ತಬಲಾದಲ್ಲಿ ಪಂ. ಸಾತಲಿಂಗಪ್ಪ ಹೂಗಾರ, ಕುಮಾರ ಅಗಡಿ, ರಘುನಂದನಗೋಪಾಲ ಹೂಗಾರ ಸಾಥ್ ನೀಡಿದರು.
ದೀಪಶ್ರೀ ನಾಯ್ಕ್ ನಿರೂಪಿಸಿದರು. ಮಧುಮತಿ ರಾಜಪುರೋಹಿತ ಪ್ರಾರ್ಥಿಸಿದರು, ರಾಘವೇಂದ್ರ ಯಡ್ತರೆ ಸ್ವಾಗತಿಸಿದರು. ಅರುಂಧತಿ ರಾಜಪುರೋಹಿತ ವಂದಿಸಿದರು.