ಹುಬ್ಬಳ್ಳಿ ರುದ್ರಾಕ್ಷಿ ಮಠದಲ್ಲಿ ಗುರುವಂದನೆ

IMG-20250710-WA0020-1.jpg
Published on

ಹುಬ್ಬಳ್ಳಿ: ಇಲ್ಲಿಯ ಮಂಗಳವಾರ ಪೇಟೆಯ ಐತಿಹಾಸಿಕ ರುದ್ರಾಕ್ಷಿಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಗುರುವಾರ ಗುರುವಂದನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬಿಜೆಪಿ ಪೂರ್ವ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ವತಿಯಿಂದ ಜಗದ್ಗುರು ಶ್ರೀ ಬಸವಲಿಂಗ ಸ್ವಾಮೀಜಿಗೆ ಭಕ್ತಿ ಸಮರ್ಪಣೆ ಮಾಡಿ ಆಶೀರ್ವಾದ ಪಡೆಯಲಾಯಿತು.

ಪೂರ್ವ ಮಹಿಳಾ ಮೋರ್ಚಾ ಬಿಜೆಪಿ ಅಧ್ಯಕ್ಷೆ ನಾಗರತ್ನ ಬಳ್ಳಾರಿ, ಪ್ರಧಾನ ಕಾರ್ಯದರ್ಶಿಗಳಾದ ಸರೋಜಾ ಛಬ್ಬಿ, ಸವಿತಾ ಚವಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನುರಾಧಾ ಚಿಲ್ಲಾಳ, ಪದ್ಮ ಚಿಗ್ನಾಮಪಲ್ಲಿ, ಭಾರತಿ ಯಲಕಾನ, ಲೀಲಾ ಸಿಂದಗಿ, ಮಾಲಾ ಸಣ್ಣೇಗೌಡ್ರು, ಮಂಜುಳಾ ಪರ್ಬತ, ಮಧು ಉಪ್ಪಿನವರ, ಕಾರ್ಯಕರ್ತರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net