ಗುರುವಂದನೆ-ಸ್ನೇಹ ಸಮ್ಮಿಲನ ನಾಳೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಅಮ್ಮಿನಬಾವಿ, ಕರಡಿಗುಡ್ಡ ಹಾಗೂ ಮರೇವಾಡ ಗ್ರಾಮದಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ ಶ್ರೀ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ 1996-97ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಡಿ. 8ರಂದು ಬೆಳಗ್ಗೆ 10 ಗಂಟೆಗೆ ಅಮ್ಮಿನಬಾವಿಯ ಶ್ರೀ ಶಾಂತೇಶ್ವರ ಪ್ರೌಢ ಶಾಲೆ ಸಭಾಭವನದಲ್ಲಿ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಸಮಾರಂಭ ಆಯೋಜಿಸಿದ್ದಾರೆ.

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸುವರು. ಡಿಡಿಪಿಐ ಎಸ್​.ಎಸ್​. ಕೆಳದಿಮಠ, ಶಾಂತೇಶ್ವರ ಪ್ರೌಢ ಶಾಲೆ ಮುಖ್ಯಾಧ್ಯಾಪಕ ಮೃತ್ಯುಂಜಯ ಅಂಗಡಿ ಅತಿಥಿಗಳಾಗಿ ಆಗಮಿಸುವರು. ಶಾಲೆ ಆಡಳಿತ ಮಂಡಳಿ ಕಾರ್ಯಧ್ಯಕ್ಷ ಎಂ.ವಿ. ಹೊಸೂರ ಅಧ್ಯಕ್ಷತೆ ವಹಿಸುವರು.

ಪ್ರೌಢ ಶಾಲೆಯ ಮತ್ತು ಎಲ್ಲ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳ 18 ಜನ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಗುವುದು. ಇದೇ ಸಂದರ್ಭದಲ್ಲಿ ದೇಶ ಸೇವೆಯಲ್ಲಿರುವ ಸಹಪಾಠಿ ಸೈನಿಕರು ಹಾಗೂ ಪಿಎಸ್​ಐ ಹುದ್ದೆಗೆ ನೇಮಕಗೊಂಡ ಕವಿತಾ ಕರ್ಕಿ ಅವರಿಗೆ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net