ಗುರುವಂದನೆ ಭಕ್ತಿ-ಸಂಭ್ರಮ ನಾಳೆ

d04d9024-df84-4fbd-92b9-f6caf0c7daf2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದಕ್ಷಿಣ ಆಫ್ರಿಕಾ ದೇಶದವರೆಗೆ ಅಂತರರಾಷ್ಟ್ರೀಯ ಬಸವ ಜ್ಯೋತಿ ಯಾತ್ರೆ ಕೈಗೊಂಡು ಬಸವ ತತ್ವದ ಪ್ರಸಾರ ಮಾಡಿ ಭಾರತಕ್ಕೆ ಆಗಮಿಸಿದ ಬೆಂಗಳೂರಿನ ಕುಂಬಳಗೂಡು ಬಸವ ಗಂಗೋತ್ರಿಯ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಅಧ್ಯಕ್ಷ ಡಾ. ಚನ್ನಬಸವಾನಂದ ಸ್ವಾಮೀಜಿ ಅವರಿಗೆ ಜೂ. 23ರಂದು ಬೆಳಗ್ಗೆ 11 ಗಂಟೆಗೆ ಅಕ್ಕಮಹಾದೇವಿ ಆಶ್ರಮದಲ್ಲಿ ಗುರುವಂದನೆ-ಭಕ್ತಿ ಸಂಭ್ರಮ ಕಾರ್ಯಕ್ರಮ ಏರ್ಪಡಿಸಿದೆ ಎಂದು ರಾಷ್ಟ್ರೀಯ ಬಸವದಳದ ಸದಸ್ಯ ಬಸಯ್ಯ ಗಣಾಚಾರಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಅನುಭವ ಮಂಟಪ ಟ್ರಸ್ಟ್​, ಇತರ ಸಂಘಟನೆಗಳ ಆಶ್ರಯದಲ್ಲಿ ಸಮಾರಂಭ ನಡೆಯಲಿದೆ. ಡಾ. ಚಂದ್ರಶೇಖರ ರಾಜಯೋಗಿಂದ್ರ ಸ್ವಾಮೀಜಿ, ಶ್ರೀ ಶಿವಾನಂದ ಪರಮಹಂಸ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ. ಚನ್ನಬಸವಾನಂದ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಗುತ್ತದೆ. ಶ್ರೀ ಶಿವಪುತ್ರ ಸ್ವಾಮೀಜಿ, ಶ್ರೀ ಚನ್ನಬಸವರಾಜ ಸ್ವಾಮೀಜಿ, ಅಬ್ದುಲ್​ ರಜಾಕ ಖಾದ್ರಿ ಹಾಷ್ಮಿ ಸಮ್ಮುಖ ವಹಿಸುವರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮ ಉದ್ಘಾಟಿಸುವರು. ರಾಷ್ಟ್ರೀಯ ಬಸವದಳ ಸದಸ್ಯ ವೀರಣ್ಣ ಹಳಿಯಾಳ ಅಧ್ಯಕ್ಷತೆ ವಹಿಸುವರು ಎಂದರು.
ಈಗಾಗಲೇ ಹಲವು ದೇಶ, ವಿದೇಶದಲ್ಲಿ ಬಸವತತ್ವ ಪ್ರಚಾರ ಮಾಡುತ್ತಾ ಬಂದಿದ್ದು, ಈ ಬಾರಿ ದಕ್ಷಿಣ ಆಫ್ರಿಕಾದವರೆಗೆ ಜ್ಯೋತಿಯಾತ್ರೆ ಮಾಡಿದೆ. ಮುಂದಿನ ವರ್ಷದಲ್ಲಿ ಲಂಡನ್​ ದೇಶದಲ್ಲಿ ಬಸವತತ್ವ ಪ್ರಸಾರ ಹಾಗೂ ಸಮಾವೇಶ ಹಮ್ಮಿಕೊಂಡಿದ್ದು, ಈಗಾಗಲೇ 100ಕ್ಕೂ ಅಧಿಕ ಜನರು ಹೆಸರು ನೋಂದಾಯಿಸಿದ್ದಾರೆ ಎಂದರು.
ಅಶೋಕ ಶೀಲವಂತ, ಸೂರ್ಯಕಾಂತ ಶೀಲವಂತ, ಬಸವಶ್ರೀ, ಅಶೋಕ ಕೋಳಕೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net