ದುರಾಸೆ ಗೂಡು ಕಟ್ಟದಂತೆ ಜಾಗ್ರತೆ ವಹಿಸಿ

Oplus_0
ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಮಹಾರಾಷ್ಟ್ರದ ಪುಣೆ ನಗರದ ಶ್ರೀಮಠದ ಭಕ್ತರು ಆಯೋಜಿಸಿದ್ದ ಗುರುವಂದನೆ ಹಾಗೂ ಹಾರಕೂಡ ಶ್ರೀಗಳ ೭೨೧ನೇ ತುಲಾಭಾರ ಸಮಾರಂಭದಲ್ಲಿ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರಿಗೆ ಮಹಾರಾಷ್ಟ್ರದ ಪೋಷಕ ತೊಡಿಸಿ ವಂದನೆ ಸಲ್ಲಿಸಿದರು.
Published on

ಬಸವಕಲ್ಯಾಣ: ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಬದುಕಿನ ಉತ್ತರ ಸಿಗುವುದು ಗುರುವಿನಲ್ಲಿ ಎಂಬುವುದು ಯಾರೂ ಮರೆಯುವಂತಿಲ್ಲ. ನಮ್ಮಲ್ಲಿ ದುರಾಸೆ ದುರಹಂಕಾರದ ಹಕ್ಕಿಗಳು ಗೂಡು ಕಟ್ಟದಂತೆ ಜಾಗ್ರತರಾಗಿರಬೇಕು ಎಂದು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಮಹಾರಾಷ್ಟ್ರದ ಪುಣೆ ನಗರದ ಶ್ರೀಮಠದ ಭಕ್ತರಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ೭೨೧ನೇ ತುಲಾಭಾರ ಸೇವೆ ಸಮಾರಂಭದ ಸಾನ್ಯಿಧ್ಯ ನವಹಿಸಿ ಮಾತನಾಡಿದ ಶ್ರೀಗಳು, ಅನಂತನ ಲೀಲಾ ಮಹಿಮೆಗಳನ್ನು ಬಲ್ಲಿದಾತ ಗುರು. ಆತ್ಮನಿಂದ ಪರಮಾತ್ಮನೆಡೆಗೆ ಸಾಗುವ, ಸತ್ಯಮಾರ್ಗ ತೋರುವ, ಆ ನಿಟ್ಟಿನಲ್ಲಿ ಮುಂದುವರಿಸುವ ಧೀಶಕ್ತಿ ಗುರುವಿನಲ್ಲಿರುತ್ತದೆ. ಒಬ್ಬ ವ್ಯಕ್ತಿ ಯಾವುದೇ ರೀತಿಯಲ್ಲಿ ಎಷ್ಟೇ ದೊಡ್ಡವನಾಗಿದ್ದರೂ ಅನಂತನಲ್ಲಿ ಶರಣಾಗತಿ ಭಾವವಿದ್ದರೆ ಆತನಿಗೆ ಯಾವತ್ತೂ ಮಾಯೆಯ ಹಂಗು ಇರುವುದಿಲ್ಲ ಎಂದು ಹೇಳಿದರು.

ದೂರದ ಪುಣೆ ಮಹಾನಗರದಲ್ಲಿ ಬದುಕು ಕಟ್ಟಿಕೊಂಡಿರುವ ನಮ್ಮ ಮಠದ ಭಕ್ತರು ತಮ್ಮ ಮೂಲ ಗುರುಪೀಠದ ಮೇಲೆ, ನಮ್ಮ ಮೇಲೆ ಇಟ್ಟಿರುವ ಭಕ್ತಿ, ಶ್ರದ್ಧೆ ನಮಗೆ ಖುಷಿ ನೀಡಿದೆ. ದಾರಿಯಿಂದ ಎಷ್ಟೇ ದೂರವಿದ್ದರೂ ಹಾರಕೂಡಧೀಶನ ಶಾಶ್ವತ ಕೃಪಾ ಮುದ್ರೆ ಯಾವತ್ತೂ ನಿಮ್ಮೊಂದಿಗಿರುತ್ತದೆ. ನಿಮ್ಮ ಕೆಲಸ ಕಾರ್ಯಗಳು ಸಮೃದ್ಧಿಯ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಶಶಿಕಾಂತ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಬೀದರ್ ಜಿಪಂ ನಿವೃತ್ತ ಉಪಕಾರ್ಯದರ್ಶಿ ಬಿ.ಕೆ. ಹಿರೇಮಠ, ಹಣಮಂತರಾವ ಕುಂಬಾರ, ರವಿ ನಿಂಬೋಳೆ, ಉಮಾಕಾಂತ ತಲವಡೆ, ರಾಜಕುಮಾರ ಪಾಟೀಲ್, ಗುರುನಾಥ ಚುಚಗೋಟೆ, ರಾಜುರೆಡ್ಡಿ ಸಿರಗಾಪುರ, ಧನರಾಜ ದೈಡೆ, ದಯಾನಂದ ಕುಂಬಾರ, ಮೇಘರಾಜ ಕುಂಬಾರ, ಬಸವರಾಜ ಪಾಟೀಲ್, ಬಸವರಾಜ ದರ್ಜಿ, ಅಂಬರಾಯ ಪಾಟೀಲ್, ಸುಭಾಷ ಪಾಟೀಲ್, ಮಹಾದೇವ ಪಾಟೀಲ್, ರಾಹುಲ ಪಾಟೀಲ್, ಕಮಲಾಕರ ಬೇಡಿಗೆ, ಸದಾನಂದ ಹಿರೇಮಠ, ಸಂತೋಷ ದರ್ಜಿ, ರಾಜಕುಮಾರ ಪೂಜಾರಿ ಇತರರಿದ್ದರು.

ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ವಿಜಯಕುಮಾರ ಕುಲಕರ್ಣಿ ಹಾಗೂ ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net