ಸೌಹಾರ್ದತೆ, ಸದ್ಭಕ್ತಿ ಇರುವಲ್ಲಿ ಸಮೃದ್ಧಿ ನೆಲೆ

Oplus_131072
ಬಸವಕಲ್ಯಾಣ ತಾಲೂಕಿನ ಮುಡಬಿಯಲ್ಲಿ ಬುಧವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಶ್ರೀಗಳ ೭೨೭ನೇ ತುಲಾಭಾರ ಸಮಾರಂಭವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಮಲ್ಲಿನಾಥ ಹಿರೇಮಠ ಹಾರಕೂಡ, ಚಂದ್ರಶೇಖರ ಪಾಟೀಲ್, ಜಗದೀಶ ಪಾಟೀಲ್, ಉದಯಕುಮಾರ ಶಟಗಾರ, ಬಾಬು ಹೊನ್ನನಾಯಕ, ನೀಲಕಂಠ ರಾಠೋಡ್, ನವಲಿಂಗ ಪಾಟೀಲ್, ಅಪ್ಪಣ್ಣ ಜನವಾಡ ಇತರರಿದ್ದರು.
Published on

ಬಸವಕಲ್ಯಾಣ: ಸಂಘಟನೆ, ಸೌಹಾರ್ದತೆ, ಸದ್ಭಕ್ತಿಯಿಂದ ಕೂಡಿದ ಗ್ರಾಮದಲ್ಲಿ ಶಾಂತಿ ಸಮೃದ್ಧಿಯ ಸಿರಿ ಸಂಪದ ಶಾಶ್ವತವಾಗಿ ನೆಲೆಗೊಳ್ಳುತ್ತದೆ ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಮುಡಬಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಗುರುವಂದನೆ ಹಾಗೂ ೭೨೭ನೇ ತುಲಾಭಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಒಂದು ಕುಟುಂಬ, ಗ್ರಾಮ, ನಾಡು, ದೇಶದಲ್ಲಿ ಸ್ತ್ರೀಯರಿಗೆ ಗೌರವ ನೀಡುವುದಾದರೆ ಅಂತಹ ರಾಷ್ಟç ಜಗನ್ಮಾತೆಯ ಶಕ್ತಿಧಾಮವಾಗಿ ವಿಶ್ವ ಚೈತನ್ಯದ ನೆಲೆಬೀಡಾಗುತ್ತದೆ. ಇಡೀ ವಿಶ್ವದಲ್ಲಿಯೇ ನಾರಿಯರಲ್ಲಿ ದೈವ ಶಕ್ತಿಯನ್ನು ಕಾಣುವ ದೇಶ ಒಂದಿದ್ದರೆ ಅದು ನಮ್ಮ ಭಾರತ ದೇಶವೆಂದು ಹೆಮ್ಮೆಯಿಂದ ಹೇಳಬೇಕಾಗುತ್ತದೆ ಎಂದು ಹೇಳಿದರು.

ಭಕ್ತಿಯಪುರವಾದ ಮುಡಬಿ ಜನತೆಯ ಅನನ್ಯ ಗುರು ಶ್ರದ್ಧೆಗೆ ಹಾರಕೂಡಧೀಶ ಯಾವತ್ತು ಮಂಗಳವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿದರು. ಶ್ರೀನಾಥ ಕಣಜಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಜಿಪಂ ಮಾಜಿ ಸದಸ್ಯರಾದ ಚಂದ್ರಶೇಖರ ಪಾಟೀಲ್, ಜಗದೀಶ ಪಾಟೀಲ್, ವಿಜಯಯಕುಮಾರ ಶಟಗಾರ, ಬಾಬು ಹೊನ್ನನಾಯಕ, ನೀಲಕಂಠ ರಾಠೋಡ್, ಬಸವರಾಜ ಕಣಜಿ, ಸದಾನಂದ ಪಾಟೀಲ್ ಇತರರಿದ್ದರು.

ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ದಿಲೀಪ ದೇಸಾಯಿ ಮತ್ತು ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು. ಖ್ಯಾತ ನಿರೂಪಕ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ಗ್ರಾಮಕ್ಕೆ ಆಗಮಿಸಿದ ಹಾರಕೂಡ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net