ಗ್ರಾಮದ ಅಭಿವೃದ್ಧಿಯೇ ಎಲ್ಲರ ನಿಲುವಾಗಿರಲಿ

Oplus_131072
ಬಸವಕಲ್ಯಾಣ ತಾಲೂಕಿನ ಖೇರ್ಡ್ (ಕೆ) ವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಗುರುವಂದನೆ ಹಾಗೂ ಹಾರಕೂಡ ಶ್ರೀಗಳ ೭೨೦ನೇ ತುಲಾಭಾರ ಸಮಾರಂಭವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಶರಣಪ್ಪ ಮಸ್ಕೆ, ದೇವಿಂದ್ರ ಬೆಂಕಿಪಳ್ಳಿ, ಹಣಮಂತರಾವ ಮೂಲಗೆ, ರಾಜು ಎಂಪಳ್ಳಿ, ಶರಣಪ್ಪ ಮೂಲಗೆ, ರವಿಕುಮಾರ ರಾಯಜಿ, ನಾಗೇಂದ್ರಪ್ಪ ಪೊಲೀಸ್ ಪಾಟೀಲ್, ಸಂತೋಷ ಅಳ್ಳೆ ಇತರರಿದ್ದರು.
Published on

ಬಸವಕಲ್ಯಾಣ: ಗ್ರಾಮ ಅಭಿವೃದ್ಧಿಯೇ ಎಲ್ಲರ ದಿಟ್ಟ ನಿಲುವಾಗಿರಬೇಕು. ವೈಯಕ್ತಿಕ ಬದುಕಿಗಾಗಿ ಬೇರೆ ಬೇರೆ ಮಾರ್ಗ ಅನುಸರಿಸಿದರೂ ಗ್ರಾಮದ ಒಳಿತಿಗಾಗಿ ಎಲ್ಲರೂ ಒಂದಾಗಿರಬೇಕು ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ತಾಲೂಕಿನ ಖೇರ್ಡಾ(ಕೆ) ವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಗುರುವಂದನೆ ಹಾಗೂ ಹಾರಕೂಡ ಶ್ರೀಗಳ ೭೨೦ನೇ ತುಲಾಭಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಹಳ್ಳಿಯ ಜನತೆ ಒಂದು ಕುಟುಂಬದ ಸದಸ್ಯರಂತೆ ಅನೋನ್ಯತೆಯಿಂದ ಬದುಕಬೇಕು, ಹಳ್ಳಿಯಲ್ಲಿ ಯಾವುದೇ ಭೇದಭಾವ ಮಾಡದೆ ಸಹೋದರ ಭಾವದಿಂದ ನಡೆದಾಗ ಮಾತ್ರ ಗ್ರಾಮದಲ್ಲಿ ಶಾಂತಿ ಸೌಹಾರ್ದತೆ ಶಾಶ್ವತವಾಗಿ ನೆಲಸುತ್ತದೆ. ದೇಹವನ್ನು ದಂಡಿಸಿ ಪ್ರಾಮಾಣಿಕ ದುಡಿಮೆಯಿಂದ ಬಂದ ಸಂಪಾದನೆಯಿAದ ಎಲ್ಲ ಕುಟುಂಬಸ್ಥರು ಪ್ರೀತಿಯಿಂದ ಉಪಯೋಗಿಸಿದರೆ ಅದಕ್ಕಿಂತ ದೊಡ್ಡ ಸೌಖ್ಯ ಇನ್ನೊಂದಿಲ್ಲ ಎಂದರು.

ಶರಣಪ್ಪ ಮಸ್ಕೆ, ದೇವಿಂದ್ರ ಬೆಂಕಿಪಳ್ಳಿ, ಹಣಮಂತರಾವ ಮೂಲಗೆ, ರಾಜು ಎಂಪಳ್ಳಿ, ಶರಣಪ್ಪ ಮೂಲಗೆ, ರವಿಕುಮಾರ ರಾಯಜಿ, ನಾಗೇಂದ್ರಪ್ಪ ಪೊಲೀಸ್ ಪಾಟೀಲ್, ಸಂತೋಷ ಅಳ್ಳೆ ಇತರರಿದ್ದರು.

ಜೀತು ಮೂಲಗೆ ಸ್ವಾಗತಿಸಿದರು. ಶರಣಬಸಪ್ಪ ಪಾರಪ್ಪಗೋಳು ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಕರಬಸಯ್ಯಸ್ವಾಮಿ ಕೋಹಿನೂರ, ದಿಲೀಪಕುಮಾರ ದೇಸಾಯಿ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು. ಗ್ರಾಮಕ್ಕೆ ಆಗಮಿಸಿದ ಹಾರಕೂಡದ ಶ್ರೀಗಳನ್ನು ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net