ಶಿಕ್ಷಕರಿಗೆ ಬೋಧಕೇತರ ಕೆಲಸಗಳ ಹೊರೆ ಕಡಿಮೆಯಾಗಲಿ

9 DWD 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿಕ್ಷಕರಿಗೆ ಬೋಧಕೇತರ ಕೆಲಸಗಳ ಹೊರೆ ಕಡಿಮೆ ಮಾಡಲು ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ಶಾಂತೇಶ್ವರ ಪ್ರೌಢಶಾಲೆಯಲ್ಲಿ ಸುತ್ತಲಿನ ಗ್ರಾಮಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1996- 97ನೇ ಶೈಕ್ಷಣಿಕ ವರ್ಷದ ಹಳೆಯ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಶಾಲೆಗಳ ಕೊರತೆಗಳನ್ನು ನೀಗಿಸಲು ಸಂಘಟಿತ ಪ್ರಯತ್ನ ಮಾಡಬೇಕು ಎಂದರು.

ಕಾರ್ಯದರ್ಶಿ ಜಿ.ಎಂ. ಹಂಚಿನಾಳ, ಮುಖ್ಯಾಧ್ಯಾಪಕ ಎಂ.ವಿ. ಅಂಗಡಿ ಅತಿಥಿಗಳಾಗಿದ್ದರು. ಪ್ರೌಢಶಾಲೆ ಆಡಳಿತ ಮಂಡಳಿ ಕಾರ್ಯಧ್ಯಕ್ಷ ಎಂ.ವಿ. ಹೊಸೂರ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಅಧ್ಯಾಪಕರಾದ ಆರ್.ಎಸ್. ಗುಲಗಂಜಿಕೊಪ್ಪ ಹಾಗೂ ಗುರುಮೂರ್ತಿ ಯರಗಂಬಳಿಮಠ, ವಿದ್ಯಾರ್ಥಿಗಳಾದ ಗಿರಿಜಾ ಹಾರಿಬೀಡಿ, ಕೀರ್ತಿ ಆರಾಧ್ಯಮಠ, ಸುಜಾತಾ ನೆಲಗುಡ್ಡ, ಸುಮಂಗಲಾ ಕಂಪ್ಲಿ ಮಾತನಾಡಿದರು. ಸುರೇಶ ಬಳಿಗೇರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net