

ಹೊಳೆನರಸೀಪುರ: ಪಡುವಲಹಿಪ್ಪೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ 2006-07ನೇ ಸಾಲಿನ ವಿದ್ಯಾರ್ಥಿಗಳು ಶನಿವಾರ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದರು. ನಿವೃತ್ತ ಶಿಕ್ಷಕರಾದ ನಿಂಗಪ್ಪ ಹಾಗೂ ಸಣ್ಣಸ್ವಾಮಿ, ಶಿಕ್ಷಕರಾದ ಮಹಾಲಿಂಗಪ್ಪ, ನರಸಿಂಹಮೂರ್ತಿ ಎಚ್.ಆರ್., ಮೋಹನ್ ಕೆ.ಪತ್ತಾರ, ಚಂದ್ರಶೇಖರ, ಜಯಂತ್ ಆಚಾರ್ಯ, ಪ್ರಕಾಶ್ ಮಾನ್ನಿಕೆರೆ, ಡಿ.ಇ. ಯೋಗಾನಂದ, ನಾಗರತ್ನಮ್ಮ, ಕೆ.ಟಿ.ಲತಾ, ಚಂದ್ರಶೇಖರ್, ಶಶಿಧರ, ಸಲೀಂ ಪಾಷಾ, ಪಂಚಾಕ್ಷರಿ, ಶೋಭಾ, ಮಮತಾ, ಲೋಕೇಶ್, ಮಧು ಹಾಗೂ ಮೋಹನ್ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಹಿರಿಯ ವಿದ್ಯಾರ್ಥಿ, ಪಾಕ್ ಗಡಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಎಚ್.ಎಸ್.ಕುಮಾರ್ ಅವರು ರಜೆ ನಿಮಿತ್ತ ಸ್ವಗ್ರಾಮಕ್ಕೆ ಆಗಮಿಸಿದ ಸಂದರ್ಭ ಭರತ್, ಉಮೇಶ್, ಉಷಾ ಹಾಗೂ ರಂಜಿತಾ ಅವರ ಸಹಕಾರ ಪಡೆದು ಕಾರ್ಯಕ್ರಮ ಆಯೋಜಿಸಿದ್ದನ್ನು ಹಿರಿಯ ಶಿಕ್ಷಕರು ಪ್ರಶಂಸಿಸಿದರು. ಹಿರಿಯ ವಿದ್ಯಾರ್ಥಿಗಳಾದ ಅಕ್ಷಯ, ಅಶ್ವಿನಿ, ಸಂಗಮೇಶ, ಸಂತೋಷ್, ರವಿ, ಪ್ರವೀಣ, ಶಿವಕುಮಾರ್, ಹೊನ್ನರಾಜ್, ಜಾಹ್ನವಿ, ರೂಪಾ, ಜಯಲಕ್ಷ್ಮೀ, ಇತರರು ಹಾಜರಿದ್ದರು.
.