ನಾರಾಯಣ ಗುರು ಮಹಾನ್ ಸಂತ :ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಹರೀಶ್ ಎಸ್ ಕೋಟ್ಯಾನ್ ಬಣ್ಣನೆ

New Project (54)
Published on

ಬಂಟ್ವಾಳ: ಜ್ಞಾನದ ಬೆಳಕು ಮನವನ್ನು ಬೆಳಗಿದರೆ, ದೀಪದ ಬೆಳಕು ಮನೆಯನ್ನು ಬೆಳಗುವುದು, ಶಿಕ್ಷಣದಿಂದ ಮಾತ್ರ ಬಡತನ ಮತ್ತು ಅಸ್ಪೃಶ್ಯತೆ ನಿರ್ಮೂಲನೆ ಸಾಧ್ಯ ಎಂದು ಪ್ರತಿಪಾದಿಸಿದ ನಾರಾಯಣಗುರುಗಳು ಜ್ಞಾನದ ಬೆಳಕು ನೀಡಿದ ಮಹಾನ್ ಸಂತ ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಹರೀಶ್ ಎಸ್ ಕೋಟ್ಯಾನ್ ತಿಳಿಸಿದರು.

ಕಲ್ಲಡ್ಕ ನರಹರಿ ನಗರ ಜಗದೀಶ್ ಸುವರ್ಣಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 18 ರ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಮಾತನಾಡಿದರು.

ಗೊಳ್ತಮಜಲ್ ಗ್ರಾಪಂ ಅಧ್ಯಕ್ಷೆ ಪ್ರೇಮ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ, ಸದಸ್ಯರಾದ ಪ್ರಶಾಂತ್ ಏರಮಲೆ, ನಾಗೇಶ್ ಏಲಬೆ, ಚಿನ್ನಾ ಕಲ್ಲಡ್ಕ, ಸುನಿತಾ ನಿತಿನ್ ಮಾರ್ನಬೈಲ್, ಸುನೀಲ್ ಸುವರ್ಣ ಮರ್ದೊಲಿ, ಶಿಕ್ಷಕಿ ರೇಖಾ ಸಿ.ಹೆಚ್. , ಸುಂದರ ಬಂಗೇರ ನರಹರಿ ಉಪಸ್ಥಿತರಿದ್ದರು.

ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net